Tuesday, September 29, 2026

BDA Apartments

ಹ್ಯಾಟ್ರಿಕ್ ಹೀರೋ ಶಿವಣ್ಣನ ಬಣ್ಣದ ಜರ್ನಿಗೆ 34 ವರ್ಷ ! BDA JK_Adv BDA Adv
Home Cinema ಹ್ಯಾಟ್ರಿಕ್ ಹೀರೋ ಶಿವಣ್ಣನ ಬಣ್ಣದ ಜರ್ನಿಗೆ 34 ವರ್ಷ !

ಹ್ಯಾಟ್ರಿಕ್ ಹೀರೋ ಶಿವಣ್ಣನ ಬಣ್ಣದ ಜರ್ನಿಗೆ 34 ವರ್ಷ !

ಬೆಂಗಳೂರು, ಫೆಬ್ರವರಿ 20, 2020 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣನ ಬಣ್ಣದ ಜರ್ನಿಗೆ 34 ವರ್ಷ ವಯಸ್ಸಾಗಿದೆ!

ಹೌದು, ಶಿವಣ್ಣ ಸಿನಿ ರಂಗಕ್ಕೆ ಕಾಲಿಟ್ಟು ಇಂದಿಗೆ 34 ವರ್ಷಗಳೇ ಕಳೆದಿವೆ. ವಿಶೇಷವೆಂದರೆ ಈಗಲೂ ಅದೇ ಉತ್ಸಾಹ, ಎನರ್ಜಿ ಉಳಿಸಿಕೊಂಡಿರುವ ಶಿವರಾಜಕುಮಾರ್ ಈಗಲೂ ಹೀರೋನೇ….

ಅಭಿಮಾನಿಗಳಿಂದ ಚಿರ ಯೌವನಿಗ ಎಂದೇ ಕರೆಯಿಸಿಕೊಳ್ಳುವ ಶಿವರಾಜಕುಮಾರ್ ಇಂದು ತಮ್ಮ ಸಿನಿಮಾ ವೃತ್ತಿ ಜೀವನದ 34 ನೇ ವರ್ಷದ ಸಂಭ್ರಮದಲ್ಲಿದ್ದಾರೆ.

ಇದೇ ಶುಭ ಸಂದರ್ಭದಲ್ಲಿ ಶಿವಣ್ಣ ತಮಿಳು ನಿರ್ದೇಶಕ ರವಿ ಅರಸು ನಿರ್ದೇಶನದಲ್ಲಿ ಮೂಡಿಬರಲಿರುವ ‘ಆರ್ ಡಿಎಕ್ಸ್’ ಸಿನಿಮಾ ಸೆಟ್ಟೇರಿದೆ.