Tuesday, September 29, 2026

BDA Apartments

ರಮ್ಯಾ ಕಾಲೆಳೆಯುತ್ತಿದ್ದ ಜಗ್ಗೇಶ್’ರಿಂದ ಮೆಚ್ಚುಗೆಯ ಮಾತುಗಳು ! BDA JK_Adv BDA Adv
Home Cinema ರಮ್ಯಾ ಕಾಲೆಳೆಯುತ್ತಿದ್ದ ಜಗ್ಗೇಶ್’ರಿಂದ ಮೆಚ್ಚುಗೆಯ ಮಾತುಗಳು !

ರಮ್ಯಾ ಕಾಲೆಳೆಯುತ್ತಿದ್ದ ಜಗ್ಗೇಶ್’ರಿಂದ ಮೆಚ್ಚುಗೆಯ ಮಾತುಗಳು !

ಬೆಂಗಳೂರು, ಫೆಬ್ರವರಿ 20, 2020 (www.justkannada.in): ಜಗ್ಗೇಶ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ರಮ್ಯಾ ಅವರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ.

ನೀರ್ ದೋಸೆ ಸಿನಿಮಾ ವಿವಾದದ ನಂತರ ಹಿರಿಯ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಆಗಾಗ್ಗೆ ನಟಿ ರಮ್ಯಾ ಅವರ ಕಾಲೆಳೆಯುತ್ತಿದ್ದರು, ಇದೀಗ ರಮ್ಯಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಪುನೀತ್ ರಾಜಕುಮಾರ್​ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ತುಂಬ ಹಿಂದೆ ನಟಿ ರಮ್ಯಾ ಪಾಲ್ಗೊಂಡಿದ್ದರು. ಅದರಲ್ಲಿ ರಮ್ಯಾ ಅವರು ಪುನೀತ್​ ರಾಜ್​ಕುಮಾರ್​ ಅವರ ಬಳಿ ಜಗ್ಗೇಶ್​ ಅವರ ಮಿಮಿಕ್ರಿ ಮಾಡಲು ಕೇಳಿದ್ದರು. ಆಗ ಪುನೀತ್​ ಕೂಡ ಜಗ್ಗೇಶ್​ ಅವರ ಎರಡು ಡೈಲಾಗ್​ಗಳನ್ನು ಮಿಮಿಕ್ರಿ ಮಾಡಿದ್ದರು.

ಆ ಫನ್ನಿ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡ ನಟ ಜಗ್ಗೇಶ್​ ಅವರು ರಮ್ಯಾರನ್ನು ಹೊಗಳಿದ್ದಾರೆ. ನಾನು ರಮ್ಯಾ ಅವರನ್ನು ವೈಯಕ್ತಿಕವಾಗಿ ತುಂಬ ಇಷ್ಟಪಡುತ್ತೇನೆ.ಆದರೆ ಕೆಲ ಸಿದ್ಧಾಂತಗಳಿಂದಾಗಿ ಮನಸು ಒಡೆದ ಹಾಳಾಯಿತು ಎಂದು ಹಳೆಯ ಮೆಲುಕು ಹಾಕಿದ್ದಾರೆ.