ವೆಬ್ ಸೀರಿಸ್’ಗಾಗಿ ಬಣ್ಣ ಹಚ್ಚಲು ಸಜ್ಜಾದ ಯುವರಾಜ್ ಸಿಂಗ್

ಬೆಂಗಳೂರು, ಫೆಬ್ರವರಿ 20, 2020 (www.justkannada.in): ಹರ್ಭಜನ್ ಸಿಂಗ್ ಬಳಿಕ ಮತ್ತೊಂದು ಟೀಂ ಇಂಡಿಯಾದ ಮಾಜಿ ಆಟಗಾರ ಬಣ್ಣದ ಲೋಕದತ್ತ ಹೊರಳುತ್ತಿದ್ದಾರೆ.

ಹೌದು, ಯುವರಾಜ್ ಸಿಂಗ್ ಈಗ ನಟನೆಯತ್ತ ಮುಖಮಾಡಿದ್ದಾರೆ. ಕ್ರಿಕೆಟ್ ಬದುಕಿನಿಂದ ನಿವೃತ್ತಿ ಪಡೆದಿರುವ ಯುವರಾಜ್ ಸಿಂಗ್ ನಟನೆ ಮೂಲಕ ಹೊಸ ಇನಿಂಗ್ಸ್ ಪ್ರಾರಂಭಿಸಿದ್ದಾರೆ.

ಅಂದ್ಹಾಗೆ ಯುವರಾಜ್ ಸಿಂಗ್ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪತ್ನಿ ಹಜೇಲ್ ಕೀಜ್ ಮತ್ತು ಸಹೋದರ ಜೋರಾವರ್ ಸಿಂಗ್ ರೊಂದಿಗೆ ವೆಬ್ ಸರಣಿಯಲ್ಲಿ ನಟಿಸಲು ಮುಂದಾಗಿದ್ದಾರೆ.

ಅಸ್ಸಾಂನ ಡ್ರೀಮ್ ಹೌಸ್ ಪ್ರೋಡಕ್ಷನ್ ನಿರ್ಮಾಣ ಮಾಡುತ್ತಿದೆ. ಇನ್ನು ವಿಶೇಷ ಅಂದರೆ ಈ ವೆಬ್ ಸರಣಿಯಲ್ಲಿ ಯುವರಾಜ್ ಸಿಂಗ್ ತಾಯಿ ಶಬ್ನಮ್ ಕೂಡ ಅಭಿನಯಿಸುತ್ತಿದ್ದಾರಂತೆ.