ಅರ್ಜುನ್ ಜನ್ಯ ಅವರ ಹೃದಯ ನಾಳ ಶೇ.99ರಷ್ಟು ಬ್ಲಾಕ್ ಆಗಿತ್ತು: ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಾಗಿತ್ತು- ವೈದ್ಯ ಆದಿತ್ಯ ಉಡುಪ ಹೇಳಿಕೆ…

ಮೈಸೂರು,ಫೆ,27,2020(www.justkannada.in):  ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಲಘು ಹೃದಯಾಘಾತವಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನ ತಮ್ಮ ನಿವಾಸದಲ್ಲಿದ್ದ ವೇಳೆ ಅರ್ಜುನ್ ಜನ್ಯಾ ಅವರಿಗೆ ಮಧ್ಯರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನಲೆ  ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯಕ್ಕೆ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಅರ್ಜುನ್ ಜನ್ಯ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಪೋಲೋ ಆಸ್ಪತ್ರೆ ವೈದ್ಯ ಆದಿತ್ಯ ಉಡುಪ ಮಾಹಿತಿ ನೀಡಿದ್ದಾರೆ.  ಅರ್ಜುನ್ ಜನ್ಯ ಅವರ ಹೃದಯನಾಳ ಶೇ.99ರಷ್ಟು ಬ್ಲಾಕ್ ಆಗಿತ್ತು: 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಾಗಿತ್ತು. ಅರ್ಜುನ್ ಜನ್ಯ ಅವರ ಕುಟುಂಬದ ಜತೆ ಚರ್ಚಿಸಿ ಚಿಕಿತ್ಸೆ ನೀಡಲಾಗಿದೆ. ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು ಸದ್ಯ ಅರ್ಜುನ್ ಜನ್ಯ ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯ ಆದಿತ್ಯ ಉಡುಪ ತಿಳಿಸಿದ್ದಾರೆ.

ಅರ್ಜುನ್ ಜನ್ಯ ಭಾನುವಾರವೇ ಆಸ್ಪತ್ರೆಗೆ ಬಂದಿದ್ರು. ಹೊಟ್ಟೆ ಉರಿ,ತಲೆನೋವು ಬೆನ್ನುನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಮತ್ತೆ ಸೋಮವಾರ ಅವರಿಗೆ ತಲೆ ನೋವು ಹಾಗೂ ಎದೆ ನೋವು ಕಾಣಿಸಿಕೊಂಡಿತು. ಆಗ ಅವರ ಇಸಿಜಿಯಲ್ಲಿ ಬಹಳ ವ್ಯತ್ಯಾಸ ಆಗಿತ್ತು. ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದ್ವಿ. ಆಗಲೇ ಗೊತ್ತಾಗಿದ್ದು ಶೇಖಡ 99% ಹೃದಯ ನಾಳ ಬ್ಲಾಕ್ ಆಗಿದೆ ಅಂತ. ತಕ್ಷಣ ಅವರ ಕುಟುಂಬಸ್ಥರ ಜೊತೆ ಮಾತನಾಡಿ ಆಂಜಿಯೋಪ್ಲ್ಯಾಸ್ಟಿ ಮಾಡಿದೇವು. ಚಿಕಿತ್ಸೆ ಪಡೆದು ಸಂಪೂರ್ಣ ನಿರಾಳರಾದರು. ಮಂಗಳವಾರ ಬೆಳಗ್ಗೆ 2.30ಕ್ಕೆ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ನಿಜವಾಗಿಯೂ 2 ಗಂಟೆ ತಡವಾಗಿದ್ರೆ ಕೆಟ್ಟಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವು ಸರಿಯಾಗಿದೆ‌. ಚಿಕಿತ್ಸೆ ಪಡೆದು ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ. ಸದ್ಯಕ್ಕೆ ಅರ್ಜುನ್ ಜನ್ಯ ಓಕೆ ಎಂದು  ವೈದ್ಯ ಆದಿತ್ಯ ಉಡುಪ ತಿಳಿಸಿದ್ದಾರೆ.

Key words: Music Director- Arjun Janya- heart attack-  mysore-apollo hospital-Dr. Aditya Udupa