ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿಲವು ಬದಲಾವಣೆ ಇಲ್ಲ- ಕಂದಾಯ ಸಚಿವ ಆರ್.ಅಶೋಕ್.

ಬೆಂಗಳೂರು,ಅಕ್ಟೋಬರ್,13,2022(www.justkannada.in): ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿಲವು ಬದಲಾವಣೆಯಾಗುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್,  ಸರ್ಕಾರಿ ಶಾಲೆಗೆ ಬರುವವರು ಸಮವಸ್ತ್ರ ಪಾಲನೆ ಮಾಡಬೇಕು . ಮನೆಯಲ್ಲಿ ಏನು ಬೇಕಾದರೂ ಧರಿಸಲಿ.  ಆದರೆ ಶಾಲೆಗೆ ಬರುವಾಗ ಸಮವಸ್ತ್ರ ಕಡ್ಡಾಯ. ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿಲವು ಬದಲಾವಣೆ ಇಲ್ಲ ಎಂದರು.kpcc-president-dk-shivakumar-function-minister-r-ashok

ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಬಗ್ಗೆ ಟೀಕಿಸಿದ ಸಚಿವ ಆರ್.ಅಶೋಕ್, ಓಡೋದು ಭಸ್ಕಿ ಹೊಡೆಸೋದು ಇದೇ ಪಾದಯಾತ್ರೆನಾ..?  ಪಾದಯಾತ್ರೆಗೆ ಒಂದು ಗಾಂಭೀರ್ಯತೆ ಇರಬೇಕು.  ಕಾಂಗ್ರೆಸ್ ಒಂದು ಫ್ಯಾಮಿಲಿ ಪಾರ್ಟಿ ಆಗಿದೆ.  ರಾಹುಲ್  ಗಾಂಧಿ ನೋಡಲು ಸೋನಿಯಾ ಗಾಂಧಿ ಬಂದು ಹೋಗಿದ್ದಾರೆ.  ಸಿದ್ಧರಾಮಯ್ಯ ಪಾದಯಾತ್ರೆ ಮಾಡಿದ್ರೆ ಸೋನಿಯಾ ಗಾಂಧಿ ಬರಲ್ಲ. ಮಗನ ಮೇಲಿನ ಪ್ರೀತಿಗೆ ಬಂದು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

Key words:  no change – government- position – hijab- Revenue Minister -R. Ashok