ತನಿಖೆ ಮುಗಿಯುವರೆಗೆ ನಾಸಿರ್ ಹುಸೇನ್ ಪ್ರಮಾಣ ವಚನ ಬೇಡ: ಉಪರಾಷ್ಟ್ರಪತಿಗೆ ಪತ್ರ – ಬಿವೈ ವಿಜಯೇಂದ್ರ.

ಬೆಳಗಾವಿ,ಮಾರ್ಚ್,5,2024(www.justkannada.in): ಪಾಕ್ ಪರ ಘೋಷಣೆ ಕೂಗಿರುವುದು ಎಫ್ ಎಸ್ ಎಲ್ ವರದಿಯಲ್ಲಿ  ದೃಢವಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ. ಈ ಸಂಬಂಧ ತನಿಖೆ ಮುಗಿಯುವವರೆಗೆ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಪ್ರಮಾಣ ವಚನ ಸ್ವೀಕಾರ ಮಾಡಬಾರದು ಎಂದು ಉಪರಾಷ್ಟ್ರಪತಿ ಅವರಿಗೆ ಪತ್ರ ಬರೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಪ್ರಕರಣ ಸಂಬಂಧ ತನಿಖೆ ಮುಗಿಯುವವರೆಗೆ ನಾಸೀರ್ ಹುಸೇನ್ ಪ್ರಮಾಣ ವಚನ ಸ್ವೀಕಾರ ಮಾಡಬಾರದು. ಪ್ರತಿಜ್ಞಾವಿಧಿ ಬೋಧಿಸದಂತೆ ಈ ಸಂಬಂಧ ಉಪರಾಷ್ಟ್ರಪತಿಗೆ ಪತ್ರ ಬರೆಯುತ್ತೇವೆ. ಸರ್ಕಾರವೇ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ.  ಎಫ್ಎಸ್ ಎಲ್ ವರದಿ  ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.

‘ಸರ್ಕಾರ ಇದೂವರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಹಿರಂಗ ಮಾಡಲು ಸಿದ್ಧವಿಲ್ಲ. ರಾಜ್ಯದ ಜನರಿಗೆ ಹೇಳಬಾರದಂಥ ಸಂಗತಿ ಅದರಲ್ಲಿ ಏನಿದೆ? ಈ ಬಗ್ಗೆ ಪೊಲೀಸರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ’ ಎಂದು ಬಿವೈ ವಿಜಯೇಂದ್ರ ಕಿಡಿ ಕಾರಿದರು.

Key words: Nasir Hussain -not – take oath -till –investigation-BY Vijayendra.