ಭ್ರಷ್ಟಾಚಾರದಿಂದ ನೈತಿಕ ಕರ್ತವ್ಯ ಪ್ರಜ್ಞೆ, ಆದರ್ಶಗಳು ಹಾಳಾಗುತ್ತಿವೆ : ಹೆಚ್ಚುವರಿ ನ್ಯಾಯಾಧೀಶರಾದ ಜಯಶ್ರೀ ಬೇಸರ

ಮೈಸೂರು.ಅಕ್ಟೊಬರ್.30,2020(www.justkannada.in) : ವ್ಯವಸ್ಥೆಯಲ್ಲಿ ನೈತಿಕ ಕರ್ತವ್ಯ ಪ್ರಜ್ಞೆ ಹಾಗೂ ಆದರ್ಶಗಳನ್ನು ಭ್ರಷ್ಟಾಚಾರ ಎಂಬ ಪೆಡಂಭೂತ ಹಾಳು ಮಾಡುತ್ತಿದೆ ಎಂದು ಹೆಚ್ಚುವರಿ ನ್ಯಾಯಾಧೀಶರಾದ ಜಯಶ್ರೀ ಬೇಸರವ್ಯಕ್ತಪಡಿಸಿದರು.jk-logo-justkannada-logo

ಜಿಲ್ಲೆಯ ಲೋಕಾಯುಕ್ತ ಇಲಾಖೆ ವತಿಯಿಂದ ಅ.27 ರಿಂದ ನ.5 ರವರೆಗೆ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ “ಜಾಗೃತಿ ಅರಿವು ಸಪ್ತಾಹ-2020” ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಅಧಿಕಾರಿಗಳು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪಾರದರ್ಶಕತೆ ಮತ್ತು ಸ್ವಯಂ ಮೌಲ್ಯಮಾಪನಕ್ಕೆ ಆದ್ಯತೆ ನೀಡಬೇಕು ಎಂದರು.

Moral,duty,ideals,shattered,corruption,Jayashree,additional judge

ಈ ವೇಳೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪಿ.ವಿ.ಸ್ನೇಹ, ಡಿಎಸ್‌ಪಿ ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

key words : Moral-duty-ideals-shattered-corruption-Jayashree- additional judge