ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಅರೆಸ್ಟ್…

ಚಾಮರಾಜನಗರ,ಜೂ,9,2020(www.justkannada.in): ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಬೇಟೆಗಾರರನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.arrest-two-men-hunted-wild-animals

ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಇಬ್ಬರು ಬೇಟೆಗಾರರನ್ನ ಬಂಧಿಸಲಾಗಿದೆ. ಬಂಧಿತರಿಂದ ನಾಡ ಬಂದೂಕು, ಬುಲೆಟ್ ಗಳು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಇಬ್ಬರು ಬೇಟೆಗಾರರು ಬಂದೂಕಿನ ಸಹಾಯದಿಂದ ಪ್ರಾಣಿಗಳನ್ನು ಭೇಟೆಯಾಡುತ್ತಿದ್ದರು.

ಈ ನಡುವೆ ಅರಣ್ಯ ಸಿಬ್ಬಂದಿಗಳ ಗಸ್ತಿನ ವೇಳೆ ಬೇಟೆಗಾರರು ಸಿಕ್ಕಿಬಿದ್ದಿದ್ದು ಅರಣ್ಯ ಇಲಾಖೆ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ.

Key words: Arrest- two men-  hunted- wild animals