ಬೆಂಗಳೂರು,ಅಕ್ಟೋಬರ್,31,2026 (www.justkannada.in): ರಾಜ್ಯದಲ್ಲಿ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕರುಗಳಲ್ಲದೇ ಜನಸಾಮಾನ್ಯರೂ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ವಿಧಿ ಇಲ್ಲದೆ ಹಾಲಿನ ದರ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ವಿಧಿ ಇಲ್ಲದೆ ಹಾಲಿನ ದರ ಏರಿಕೆ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ನಮಗಿಂತಲೂ ಹಾಲಿನ ದರ ಹೆಚ್ಚಿದೆ. ರೈತ ಬಹಳ ಕಷ್ಟದಲ್ಲಿದ್ದಾನೆ. ಗೋವು ರಕ್ಷಣೆಯಾಗಬೇಕಾದರೇ ರೈತನ ಬಳಿ ಹಣ ಇರಬೇಕು. ಹಾಗಾಗಿ ಬಹಳ ಯೋಚನೆ ಮಾಡಿ ದರ ಏರಿಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಉತ್ತರಾಖಂಡ್ ನಲ್ಲಿ ಐವರು ಕನ್ನಡಿಗರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಉತ್ತರಾಖಂಡ್ ದುರಂತ ಎಲ್ಲರಿಗೂ ಗಾಬರಿ ತಂದಿದೆ. ಮೃತದೇಹ ತರಲು ವ್ಯವಸ್ಥೆ ಮಾಡಲಾಗುತ್ತದೆ ಮುಂದಕ್ಕೆ ಬಹಳ ಎಚ್ಚರಿಕೆ ಇರಬೇಕಿದೆ ಎಂದರು.






