ವರುಣಾ ಕ್ಷೇತ್ರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ನೆರವು

Promotion

ಮೈಸೂರು, ಜುಲೈ 11, 2021 (www.justkannada.in): ವರುಣಾ ಕ್ಷೇತ್ರದ ದಾಸನೂರು ಗ್ರಾಮಕ್ಕೆ ಶಾಸಕ ಯತೀಂದ್ರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.

ಸೋಂಕಿನಿಂದ ಮೃತಪಟ್ಟ 4 ಕುಟುಂಬಗಳಿಗೆ ಧನಸಹಾಯ ವಿತರಿಸಿದರು. ಕಾಂಗ್ರೆಸ್ ಪಕ್ಷದ ಸಹಾಯಹಸ್ತ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ ಚೆಕ್ ವಿತರಣೆ ಮಾಡಿದ ಅವರು, ಕಾಂಗ್ರೆಸ್ ಪಕ್ಷದ ಆದೇಶದ ಮೇರೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸಹಾಯಹಸ್ತ ಯೋಜನಾ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.

ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಾಗಿದ್ದು, ಕೊರೋನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಲಾಗುತ್ತಿದೆ. ಈ ಮೂಲಕ ಅವರಿಗೆ ಧೈರ್ಯ ತುಂಬಿ ಸದಾ ಪಕ್ಷದ ಕಾರ್ಯಕರ್ತರು ಹಾಗೂ ನಾವು ಜೊತೆಗಿರುತ್ತೇವೆಂದು ಅಭಯ‌ ನೀಡಲಾಗುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇದೇವೇಳೆ ಗ್ರಾಮಸ್ಥರು ಸಮಸ್ಯೆ ಆಲಿಸಿದ ಶಾಸಕರು. ಕುಂದುಕೊರತೆ ಆಲಿಸಿ ಶೀಘ್ರವೇ ಸಮಸ್ಯೆಗಳನ್ನು  ಬಗೆಹರಿಸುವ ಭರವಸೆ ನೀಡಿದರು.