ಸಚಿವ ಸ್ಥಾನಕ್ಕಾಗಿ ನಾನು ಯಾವತ್ತೂ ಅಂಗಲಾಚಿಲ್ಲ: ಮಂತ್ರಿಗಿರಿ ಕೊಟ್ರೆ ಕೆಲಸ ಮಾಡ್ತೀನಿ ಎಂದ್ರು ಹೆಚ್.ವಿಶ್ವನಾಥ್ …

Promotion

ಬೆಂಗಳೂರು,ಫೆ,12,2020(www.justkannada.in): ಸಚಿವ ಸ್ಥಾನ ಕೊಟ್ರೆ ಕೆಲಸ ಮಾಡ್ತೀನಿ. ಆದರೆ ನಾನು ಸಚಿವ ಸ್ಥಾನಕ್ಕಾಗಿ ಯಾವತ್ತೂ ಅಂಗಲಾಚಿಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ನಾನು ಸಿಎಂ ಬಳಿ ಮಂತ್ರಿ ವಿಚಾರ ಆಗಲಿ, ರಾಜಕೀಯ ವಿಚಾರ ಆಗಲಿ ಚರ್ಚೆ ಮಾಡಲ್ಲ. ಮಂತ್ರಿ ಸ್ಥಾನ ಯಾವಾಗ ಬರುತ್ತೆ, ಅದಾಗಿಯೇ ಬರುತ್ತೆ. ನನಗೆ ಸಚಿವ ಸ್ಥಾನ ಕೊಡಲೇಬೇಕು, ಕೊಟ್ಟೆ ಕೊಡ್ತಾರೆ  ಎಂದರು.

ಹಾಗೆಯೇ ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ. ನಾನು ಸಚಿವ ಸ್ಥಾನಕ್ಕಾಗಿ ಯಾವತ್ತೂ ಅಂಗಲಾಚಿಲ್ಲ. ಸಚಿವ ಸ್ಥಾನ ನೀಡಿದ್ರೆ ಕೆಲಸ ಮಾಡ್ತೀನಿ ಎಂದರು.

Key words: ministerial position-H. Vishwanath-cm bs yeddyurappa-work