ಮದರಸವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ  ಸಚಿವೆ ಶಶಿಕಲಾ ಜೊಲ್ಲೆ ದಂಪತಿ..

ಚಿಕ್ಕೋಡಿ,ಮೇ,25,2021(www.justkannada.in): ಗ್ರಾಮಗಳಲ್ಲಿ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಮಧ್ಯೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಹೆಚ್ಚಾಗಿದೆ.  ಈ ಮಧ್ಯೆ ಬೊರಗಾವ್ ನಲ್ಲಿರುವ ಮದರಸಾವನ್ನು ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಸಚಿವೆ ಶಶಿಕಲಾ ಜೊಲ್ಲೆ  ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಿದ್ದಾರೆ.jk

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಹೆಚ್ಚಾಗಿದೆ.  ದಿನ ಕಳೆದಂತೆ ಸ್ಥಳೀಯ ಆಸ್ಪತ್ರೆಗಳು ಫುಲ್ ಆಗುತ್ತಿವೆ. ನೋ ಬೆಡ್ ಬೋರ್ಡ್ ಹಾಕೊದಷ್ಟೆ ಬಾಕಿ ಇದೆ..ಹೀಗಾಗಿ ಅನಿವಾರ್ಯ ಕಾರಣಗಳಿಂದ ಸೊಂಕಿತರೂ ಹೇಗೋ ಮಹಾರಾಷ್ಟ್ರದ ಮೀರಜ್, ಸಾಂಗ್ಲಿ, ಕೊಲ್ಹಾಪುರ ಗಳ ಆಸ್ಪತ್ರೆಗೆ ದಾಖಲು ಆಗುತ್ತಿದ್ದರು. ಇದೀಗ ಚಿಕ್ಕೋಡಿ ಭಾಗದಲ್ಲಿ ಸೀನ್ ಸಂಪೂರ್ಣ ಬದಲಾಗಿದೆ..ಯಾರು ಗಡಿ ದಾಟಿ ಹೋಗಬಾರದು ಅಂತ ಜೊಲ್ಲೆ ದಂಪತಿ ಪಣ ತೊಟ್ಟಿದ್ದಾರೆ. ಮಹಾರಾಷ್ಟ್ರ ಹಂಗು ಒಂದಚೂರು ಕನ್ನಡಿಗರ ಮೇಲೆ ಬೇಡ  ಎಂದು ಗಡಿಗೆ ಹೊಂದಿಕೊಂಡಿರುವ ಗ್ರಾಮಗಳನ್ನೆ ಟಾರ್ಗೆಟ್ ಮಾಡಿದ್ದಾರೆ.ಆ ಗ್ರಾಮಗಳಲ್ಲಿ ಆಕ್ಸಿಜನ್ ಇರುವ ತುರ್ತು ಆಸ್ಪತ್ರೆಯನ್ನು ಫಟಾಫಟ್ ಜೊಲ್ಲೆ ಚಾರಿಟೇಬಲ್ ಟ್ರಸ್ಟ್ ರಾತ್ರೋ ರಾತ್ರಿ ರೆಡಿ ಮಾಡಿ ಸೋಂಕಿತ ಸೇವೆಗೆ ಸಿದ್ದಗೊಳಿಸುತ್ತಿದೆ..ಗ್ರಾಮದಲ್ಲಿ ಪರಿಸ್ಥಿತಿ ತುಂಬಾನೇ ವಿಷಮವಾಗುತ್ತಿದೆ..ಹಳ್ಳಿಗಳ್ಳಿಗಳಲ್ಲಿ ಸಾವಿನ ಪ್ರಮಾಣ  ಏರಿಕೆಯಾಗ್ತಿದೆ..ಗ್ರಾಮದ ರೋಗಿಗಳು ಅಲ್ಲೇ ಚಿಕಿತ್ಸೆ ಪಡೆಯುವಂತಾಗಬೇಕು ಅಂತಾ ಜೊಲ್ಲೆ ದಂಪತಿ. ಈಗಾಗಲೇ 5 ಗ್ರಾಮಗಳಲ್ಲಿ ಉಚಿತ ಪ್ರಣಾವಾಯು ಹೊಂದಿರುವ ಕೋವಿಡ್ ಕೇರ್ ಸೆಂಟರ್ ತೆರೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಣ್ಣಾ ಮತ್ತು ವೈನಿ ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಕೋವಿಡ್ ತುರ್ತು ಆಸ್ಪತ್ರೆಗೆ ಚಾಲನೆ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬೊರಗಾವ್ ನಲ್ಲಿರುವ ಮದರಸಾವನ್ನೆ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಸೇರಿ ಹಾಸ್ಪಿಟಲ್ ಮಾಡಿದ್ದಾರೆ. ಪಕ್ಕದಲ್ಲೇ ಮಹಾರಾಷ್ಟ್ರದ ಈಚಲಕರಂಜಿ ಪಟ್ಟಣ ಇದ್ದು, ಇಲ್ಲಿನ ಸೊಂಕಿತರು ಅಲ್ಲಿಗೆ ಅವಲಂಬಿತರು ಇದ್ದರು.ನಮ್ಮ ಜನಕ್ಕೇ ನಮ್ಮಲ್ಲೇ ಚಿಕಿತ್ಸೆ ದೊರೆಯುವಂತಾಗಲು ಸಚಿವೆ ಶಶಿಕಲಾ ಜೊಲ್ಲೆ ದಂಪತಿ ಬೋರಗಾವ್ ನಲ್ಲಿರುವ ಮದರಸಾದಲ್ಲಿ 25ಬೆಡ್ ಗಳನ್ನು ಹೊಂದಿರುವ ಕೋವಿಡ್ ಕೇರ್ ಸೆಂಟರ್ ಶುರುಮಾಡಿದ್ದಾರೆ..ಇಲ್ಲಿ ಆಕ್ಸಿಜನ್ ವ್ಯವಸ್ಥೆ ಕೂಡ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಈ ತಾತ್ಕಾಲಿಕ ಆಸ್ಪತ್ರೆಯ ನಿರ್ವಹಣೆಗೆ ಅಗತ್ಯ ವೈದ್ಯರನ್ನು ಜೊಲ್ಲೆ ಚಾರಿಟೇಬಲ್ ಸಂಸ್ಥೆಯಿಂದ ವ್ಯವಸ್ಥೆ ಮಾಡಲಾಗಿದೆ.. ಮದರಸದಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯುವ ಮೂಲಕ ಗ್ರಾಮಸ್ಥರಲ್ಲಿ  ಭಾತ್ರುತ್ವ ಇಮ್ಮಡಿಗೊಳ್ಳೋ ಸಂಕೆತಕ್ಕೆ ಇದು ಸಾಕ್ಷೀ ಯಾಗಿದೆ.

Key words: minister Sashikala Jolle – madrassa -converted – covid care center-belgavi