ಕೆಜಿಎಫ್ ಚಾಪ್ಟರ್-2 ಚಿತ್ರತಂಡದಿಂದ ಬಂತು ಹೊಸ ಸುದ್ದಿ!

ಬೆಂಗಳೂರು, ಮೇ 25, 2021 (www.jkustkannada.in): ಸಾಕಷ್ಟು ಕುತೂಹಲ ಮೂಡಿಸಿರುವ ರಾಕ್ಹಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್​​ ಚಾಪ್ಟರ್​-2 ಕುರಿತ ಸುದ್ದಿಯೊಂದು ಹೊರಬಿದ್ದಿದೆ,

ಹೌದು. ಕೆಜಿಎಫ್​​ ಚಾಪ್ಟರ್​-2 ಪೋಸ್ಟ್​ ಪ್ರೊಡಕ್ಷನ್​ ಬಹುತೇಕ ಪೂರ್ಣಗೊಂಡಿದೆ. ದೇಶದಲ್ಲಿ ಚಿತ್ರಮಂದಿರ ರೀ-ಓಪನ್​ ಆಗುವುದನ್ನು ಆಧರಿಸಿ ಸಿನಿಮಾ ರಿಲೀಸ್​ ದಿನಾಂಕ ನಿಗದಿ ಆಗಲಿದೆ.

ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ಗೆ ಅವಕಾಶ ನೀಡದಿದ್ದರೆ ಸಿನಿಮಾ ರಿಲೀಸ್​ ದಿನಾಂಕ ಮುಂದೂಡುವ ನಿರ್ಧಾರವನ್ನು ಚಿತ್ರತಂಡ ಕೈಗೊಂಡಿಂಡಿದೆ.

ಬಿಗ್ ಬಜೆಟ್ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ನೇರವಾಗಿ ಒಟಿಟಿಯಲ್ಲಿ ಚಿತ್ರ ರಿಲೀಸ್​ ಮಾಡುವ ಸಾಧ್ಯತೆ ಕಡಿಮೆ. ಹೀಗಾಗಿ ಚಿತ್ರ ನೋಡಲು ಅಭಿಮಾನಿಗಳು ಕೊರೊನಾ ಹಾವಳಿ ನಿಲ್ಲುವವರೆಗೂ ಕಾಯಬೇಕು.