ಸಚಿವ ಕೆ.ಎಸ್.ಈಶ್ವರಪ್ಪಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಎಫೆಕ್ಟ್ !, ವಡ್ಡ ಪದ ಬಳಕೆಗೆ ಪ್ರತಿಭಟನೆ ಬಿಸಿ !

ಮೈಸೂರು, ಸೆಪ್ಟೆಂಬರ್ 22, 2019 (www.justkannada.in): ಇಂದು ಸಚಿವ ಕೆ.ಎಸ್.ಈಶ್ವರಪ್ಪಗೆ ನೀತಿ ಸಂಹಿತೆ ಎಫೆಕ್ಟ್ ಎದುರಾಯಿತು.

ಹೀಗಾಗಿ ಮೈಸೂರು ಪ್ರವಾಸ ಮೊಟಕುಗೊಳಿಸಿ ಹಿಂದಿರುಗಿದರು.ಜತೆಗೆ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನೆ ರದ್ದು ಮಾಡಿ ಕೇವಲ ಕೇವಲ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಹಿಂದಿರುಗಿದರು.

ಪೂರ್ವನಿಯೋಜಿತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿದ್ದೆ. ಈಗ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಚಾಮುಂಡಿ ತಾಯಿ ದರ್ಶನ ಮಾಡಿ ನಿರ್ಗಮಿಸುತ್ತೇನೆ ಎಂದು ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಈಶ್ವರಪ್ಪಗೆ ಭೋವಿ ಸಮಾಜದಿಂದ ಗೇರಾವ್.

ಚಾಮುಂಡಿಬೆಟ್ಟದಲ್ಲಿ ಭೋವಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಈಶ್ವರಪ್ಪ ವಿರುದ್ದ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಸಮುದಾಯದ ನಾಯಕರು. ಇತ್ತೀಚೆಗೆ ಸಿದ್ದರಾಮಯ್ಯರನ್ನ ವಡ್ಡ ಎಂದು ಈಶ್ವರಪ್ಪ ನಿಂಧಿಸಿದ್ದರು. ಹೀಗಾಗಿ ವಡ್ಡ ಪದ ಬಳಕೆಗೆ ಭೋವಿ‌ ಸಮಾಜದಿಂದ ಖಂಡನೆ ವ್ಯಕ್ತವಾಯಿತು. ಗೋ ಬ್ಯಾಕ್ ಈಶ್ವರಪ್ಪ ಎಂದು ಘೋಷಣೆ ಕೂಗಲಾಯಿತು.