Wednesday, July 29, 2026

BDA Apartments

Home Front Page ಆಪರೇಷನ್ ಸಂತ್ರಸ್ತರ ರಕ್ಷಣೆ ದಿಲ್ಲಿಗೆ ಹೋಗಿ ನೆರೆ ಸಂತ್ರಸ್ತರ ಹೆಸರು ಹೇಳುವ ಯಡಿಯೂರಪ್ಪ: ಮಾಜಿ ಸಿಎಂ...

ಆಪರೇಷನ್ ಸಂತ್ರಸ್ತರ ರಕ್ಷಣೆ ದಿಲ್ಲಿಗೆ ಹೋಗಿ ನೆರೆ ಸಂತ್ರಸ್ತರ ಹೆಸರು ಹೇಳುವ ಯಡಿಯೂರಪ್ಪ: ಮಾಜಿ ಸಿಎಂ ಎಚ್.ಡಿಕೆ ಟೀಕೆ

ಬೆಂಗಳೂರು, ಸೆಪ್ಟೆಂಬರ್ 22, 2019 (www.justkannada.in): ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ ದಿಲ್ಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತೆರಳಿದ್ದೇನೆ ಎಂದಿರುವುದು ಒಂದು ‘ರಾಜಕೀಯ ನಾಟಕ’ ಎಂದು ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ

ಅಮಿತ್ ಶಾ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸಲಷ್ಟೇ ಬಿಎಸ್ ವೈ ದಿಲ್ಲಿಗೆ ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ