ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ: ಸಚಿವ ಕೆ.ಎಸ್.ಈಶ್ವರಪ್ಪ ಟೀಕೆ

ಮೈಸೂರು, ಸೆಪ್ಟೆಂಬರ್ 22, 2019 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ನಿನ್ನೆ ಭಾಷಣ ಮಾಡುವಾಗ ಸಿದ್ದರಾಮಯ್ಯ ಅವರು ಕೇಳಿದ್ದಾರೆ. ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟವರು ಯಾವ ಮುಖ ಇಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ ಅಂತ ಪ್ರಶ್ನಿಸಿದ್ದಾರೆ. ನೀವೇ ಪಕ್ಷಾಂತರ ಪ್ರವೀಣ ಇನ್ನು ಬೇರೆಯವರ ಬಗ್ಗೆ ಯಾಕೆ‌ ಭಾಷಣ ಮಾಡುತ್ತೀರಿ ?ನೀವು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿಲ್ಲವೇ ? ಯಾವ ಮುಖ ಇಟ್ಟುಕೊಂಡು ಚುನಾವಣೆ ಎದುರಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಕೇವಲ ಭಾಷಣ ಮಾಡುವುದನ್ನು ಬಿಟ್ಟು ನೀವು ನಡೆದು ಬಂದ ಹಾದಿಯನ್ನೂ ನೆನಪಿಸಿಕೊಳ್ಳಿ ಎಂದಿದ್ದಾರೆ. ಇನ್ನು ಮದ್ಯಂತರ ಚುನಾವಣೆ ಬರುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ.ಕೆ.ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರದ ಹಪಹಪಿಯಿಂದ ಅವರುಗಳು ಆ ರೀತಿ ಹೇಳುತ್ತಿದ್ದಾರೆ. ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್, ಜೆಡಿಎಸ್ ನವರು ಆ ರೀತಿ ಮಾತನಾಡುತ್ತಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಮಧ್ಯಂತರ ಚುನಾವಣೆ ಬರುತ್ತೆ? ಜನರಿಗೆ ಈ ಬಾರಿ ಯಾವ ಗೊಂದಲವಿಲ್ಲ ಎಂದು ಹೇಳಿದರು.