ಹಿಂಬಾಗಿಲೆನ್ನುವ ರಾಜ್ಯಸಭೆಗೆ ಹೋಗವಂತಾಗಿದ್ದು ವಿಧಿಯ ಆಟ- ಹೆಚ್.ಡಿಡಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಕುರಿತು ಸಚಿವ ಡಾ. ಕೆ.ಸುಧಾಕರ್ ಟ್ವೀಟ್…

ಬೆಂಗಳೂರು,ಜೂ,10,2020(www.justkannada.in):  ಜೂನ್ 19 ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ ದೇವೇಗೌಡರು ಸ್ಪರ್ಧಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನಯವಾಗಿ ಕಾಲೆಳೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುಧಾಕರ್, ‘ಸುದೀರ್ಘವಾದ ರಾಜಕೀಯ ಬದುಕಿನ ಬಹುಷಃ ಕೊನೆಯ ಹೋರಾಟದಲ್ಲಿ, ಹಿಂಬಾಗಿಲೆನ್ನುವ ರಾಜ್ಯಸಭೆಗೆ ಹೋಗವಂತಾಗಿದ್ದು ವಿಧಿಯ ಆಟ. ಆದರೆ ಈ ಮುತ್ಸದ್ದಿಗಳ ಸೇವೆ ಹಾಗೂ ಹೋರಾಟ ಅನುಕರಣೀಯ. ದೇವರು ಇಬ್ಬರಿಗೂ ಒಳ್ಳೆಯ ಆರೋಗ್ಯವನ್ನು ಕರುಣಿಸಲಿ. ಬಿಜೆಪಿಯ ಉದಾರತೆಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.minister-k-sudhakar-rajyasabha-election-hd-devegowda-mallikarjuna-khrage

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಬ್ಬರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಗೆ ಟಿಕೆಟ್ ನೀಡಲಾಗಿದೆ.

Key words: minister- K.Sudhakar-rajyasabha-election-HD Devegowda- Mallikarjuna khrage