ಮೈಸೂರಿನಲ್ಲಿ ಅಭಿಮಾನಿ ಬಳಗದಿಂದ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬ ಆಚರಣೆ….

ಮೈಸೂರು,ಜೂ,10,2020(www.justkannada.in): ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹುಟ್ಟುಹಬ್ಬ, ಈ ಹಿನ್ನೆಲೆ ಮೈಸೂರು ನಗರದ ಅಭಿಮಾನಿ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನ ಆಚರಿಸಲಾಯಿತು.

ನಗರದ ಅಭಿಮಾನಿ ಬಳಗದ ವತಿಯಿಂದ ಬೆಳ್ಳಗೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕ ರಿಗೆ ಉಚಿತವಾಗಿ  ಸಿಹಿ ವಿತರಿಸಲಾಯಿತು.  ಹಾಗೆಯೇ ನಗರದ ಬೀದಿ ಬದಿಯಲ್ಲಿ ಇರುವ ಗೋವುಗಳಿಗೆ ಮೇವು ವಿತರಿಸಲಾಯಿತು.  ನಂತರ ರಾಜಕುಮಾರ ರಸ್ತೆ ಯಲ್ಲಿ ಇರುವ  ತ್ರಿವೇಣಿ ವೃತ್ತದಲ್ಲಿ ಹಾಗೂ ಸುತ್ತ ಮುತ್ತ,ಗಿಡಗಳನ್ನು ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.birthday-minister-ks-eshwarappa-fans-celebrate-mysore

ನಂತರ  ಮಾಜಿ ನಗರಪಾಲಿಕೆ ಸದಸ್ಯರಾದ ಶಿವಕುಮಾರ್ ಮಾತನಾಡಿ ಈ ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗಿರುವ  ಸಚಿವ ಕೆ.ಎಸ್ ಈಶ್ವರಪ್ಪ  ಅವರಿ ನೂರಾರು ವರ್ಷಗಳ ಕಾಲ ಬಾಳಲಿ ಎಂದು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಪೂಜೆ ಸಲ್ಲಿಸಿದ್ದೇವೆ ಎಂದರು.

ನಗರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು ಮಾತನಾಡಿ,  ಸಚಿವ ಕೆ.ಎಸ್ ಈಶ್ವರಪ್ಪ ಅವರು ನಮ್ಮ ನಾಯಕರು. ಹೀಗಾಗಿ ಬೀದಿ ಬದಿಯ ಹಸುಗಳ ರಕ್ಷಣೆ ಹಾಗೂ ಹಸುಗಳ ಆರೋಗ್ಯ ದ ದೃಷ್ಟಿಯಿಂದ ನಗರದ ಎಲ್ಲಾ ಹಸುಗಳಿಗೆ ಮೇವು ವಿತರಿಸಿ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ್ದು ಮನಸ್ಸಿಗೆ ತೃಪ್ತಿಕರ. ಹಾಗೆಯೇ ಪರಿಸರದ ದೃಷ್ಟಿಯಿಂದ ನೂರಾರು ವಿವಿಧ ತಳಿಯ ಗಿಡ ಗಳನ್ನು ನೆಟ್ಟಿ ಅದರ ಪೋಷಣೆ ಮಾಡುವ ಮೂಲಕ ಕೋವಿಡ್ ೧೯ ನನ್ನು ಈ ದೇಶದಿಂದಲೇ ದೂರ ಅಟ್ಟುವ ಕೆಲಸಕ್ಕೆ ಎಲ್ಲಾ ನಾಗರೀಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಸಂಧರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಜಯರಾಮ್,ನಗರ ಹಿಂದುಳಿದ ವರ್ಗಗಳ ಮೊರ್ಚಾ ದ ನಗರ ಅಧ್ಯಕ್ಷರಾದ ಜೋಗಿಮಂಜು, ಗ್ರಾಮಾಂತರ ಹಿಂದುಳಿದ ವರ್ಗಗಳ ಮೊರ್ಚಾ ದ ಅಧ್ಯಕ್ಷರಾದ ಪರುಶುರಾಮಪ್ಪ,ಮುಖಂಡರಾದ ರಮೇಶ್ ಕುರುಬಾರಳ್ಳಿ,ಆನಂದ್,ಪಾಪಣ್ಣ,ಮಣಿರತ್ನಂ ಶರತ್(ಭಂಡಾರಿ) ರಾಜು,ನಾಗೇಶ್, ಶ್ರೀಕಂಠ ನಂಜನಗೂಡು, ಪ್ರೇಮ್ ಕುಮಾರ್, ರಾಜೇಶ್, ನಂದನ್ ಮುಂತಾದವರು ಇದ್ದರು.

Key words: Birthday – Minister- KS Eshwarappa – Fans-celebrate-Mysore