ಕೊರೊನಾ ಮತ್ತು ಪ್ರವಾಹ ಸಂಕಷ್ಟದಿಂದ ನಾಡಿನ ಜನರ ಪಾರು ಮಾಡುವಂತೆ ಪ್ರಾರ್ಥನೆ – ಸಿಎಂ ಬಿ.ಎಸ್.ವೈ ಹೇಳಿಕೆ… 

ಮೈಸೂರು,ಅಕ್ಟೋಬರ್,26,2020(www.justkannada.in) :  ಮೈಸೂರು ದಸರಾಕ್ಕೆ ತನ್ನದೇಯಾದ ಇತಿಹಾಸವಿದೆ. ಐತಿಹಾಸಿಕ ಪರಂಪರೆ, ಸಾಂಸ್ಕೃತಿಕ ಹಿನ್ನೆಲೆಯಿದೆ. ಭಾರತೀಯ ಚರಿತ್ರೆಯಲ್ಲಿ ಇಷ್ಟೊಂದು ಕಾಲ ನಡೆದು ಬಂದಿರುವ ದಸರಾ ಹೊರತು ಮತ್ತೊಂದು ಹಬ್ಬ ಕಾಣಲು ಸಿಗುವುದಿಲ್ಲ. ಕೊರೊನಾ ಮತ್ತು ಪ್ರವಾಹ ಸಂಕಷ್ಟದಿಂದ  ನಾಡಿನ ಜನರ ಪಾರು ಮಾಡಿ ಶಾಂತಿ ಮತ್ತು ಸೌಹರ್ದತೆ ಹಾಗೂ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದ್ದೇವೆ. ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. likedasaraindianhistoryanotherfestivalwontfindcm-b-s-y

ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ನಂತರ ವಿಶ್ವ ವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ವಿಜಯದಶಮಿ ಉದ್ಘಾಟನೆ ನೆರವೇರಿಸಿದ್ದೇನೆ. ಮೈಸೂರು ದಸರಾ ಮಹೋತ್ಸವ ಅದರದ್ಧೇ ಆದ ಐತಿಹಾಸಿಕ ಪರಂಪರೆ ಸಾಂಸ್ಕೃತಿಕ ಹಿನ್ನೆಲೆ ಇದೆ ಎಂದರು.

ದೇಶ, ವಿದೇಶದ ಜನರ ಆಕರ್ಷಣೆಯ ದಸರಾ

ಬಹಳ ಅಪರೂಪದ ಕನ್ನಡ ನಾಡಿನ ಕಲೆ,ಸಂಸ್ಕೃತಿ ಬಿಂಬಿಸುವ ಹಾಗೂ ದೇಶ, ವಿದೇಶದ ಜನರ ಆಕರ್ಷಣೆಯ ದಸರಾವನ್ನು ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಗಿದೆ. ಕೊರೊನಾ ಹಿನ್ನೆಲೆ ಸಂಪ್ರದಾಯ ಕ್ಕೆ ಸೀಮಿತವಾಗಿ ಮಾಡುವುದು ಅನಿವಾರ್ಯವಾಗಿತ್ತು ಎಂದರು.

ದೃಷ್ಟ ಸಂಹಾರ, ಶಿಷ್ಟರ ರಕ್ಷಣೆ ಮಾಡಿದ ನಾಡ ಹಬ್ಬ

ಜನಸಂದಣಿ ಸೇರದಂತೆ ಬಹುತೇಕ ಕಾರ್ಯಕ್ರಮ ರದ್ದುಪಡಿಸಿದ್ದೇವೆ.  ದೃಷ್ಟ ಸಂಹಾರ, ಶಿಷ್ಟರ ರಕ್ಷಣೆ ಮಾಡಿದ ನಾಡ ಹಬ್ಬವಿದು. ಹೊಸ ಚೈತನ್ಯ, ಉತ್ಸವ, ಆತ್ಮವಿಶ್ವಾಸ ಮೂಡಿಸಿಕೊಳ್ಳಲು ನವರಾತ್ರಿ ಮುನ್ನುಡಿಯಾಗುತ್ತದೆ ಎಂದು ಹೇಳಿದರು.

ಕೊರೊನಾ, ಅತಿವೃಷ್ಟಿಯ ವಿರುದ್ಧ ವಿಜಯಸಾಧಿಸುವ ವಿಶ್ವಾಸವಿದೆ 

ಕೊರೊನಾ ಹಾಗೂ ಅತಿವೃಷ್ಟಿಯಿಂದ ನಾಡಿನ ಜನರು ಸಂಕಷ್ಟದಲ್ಲಿದ್ದಾರೆ. ಇದರ ವಿರುದ್ಧ ವಿಜಯ ಸಾಧಿಸುವ ವಿಶ್ವಾಸವಿದೆ. ಈ ಹಿನ್ನೆಲೆ ಅಗತ್ಯ ಕ್ರಮ ಕೈಗೊಂಡಿದ್ದು, ಜನರು ಸರಕಾರದೊಂದಿಗೆ ಇಹಕಾರ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದರು.likedasaraindianhistoryanotherfestivalwontfindcm-b-s-y

ಕೊರೊನಾ ಮತ್ತು ಪ್ರವಾಹ ಸಂಕಷ್ಟದಿಂದ  ನಾಡಿನ ಜನರ ಪಾರು ಮಾಡುವಂತೆ ಪ್ರಾರ್ಥನೆ

ಈ ಬಾರಿ ಜಿಲ್ಲಾಡಳಿತದ ತೀರ್ಮಾನದಂತೆ ಸರಳವಾಗಿ ನಡೆದಿದೆ. ಮುಂದಿನ ವರ್ಷ ವಿಜೃಭಂಣೆಯಿಂದ ನಡೆಸಲಾಗುವುದು. ಕೊರೊನಾ ಮತ್ತು ಪ್ರವಾಹ ಸಂಕಷ್ಟದಿಂದ  ನಾಡಿನ ಜನರ ಪಾರು ಮಾಡಿ ಶಾಂತಿ ಮತ್ತು ಸೌಹರ್ದತೆ ಹಾಗೂ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದ್ದೇವೆ. ನಾಡಿನ ಸಮಸ್ತ ಜನತೆಗೆ ಒಳ್ಳೆಯದು ಮಾಡಲಿ ಎಂದು ಬೇಡಿಕೊಂಡಿದ್ದಾಗಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

key words : Like-Dasara-Indian-history-Another-festival-won’t-find-CM B.S.Y.