ಟಿ-20 ‘ಹಿಟ್’ ಮ್ಯಾನ್ ದಾಖಲೆ ಮುರಿದ ‘ಕಿಂಗ್’ ಕೊಯ್ಲಿ

ಮುಂಬೈ, ಜನವರಿ 08, 2019 (www.justkannada.in): ರೋಹಿತ್ ಶರ್ಮಾ ಹೆಸರಿನಲ್ಲಿದ್ದ ವಿಶ್ವದಾಖಲೆಯೊಂದನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುರಿದಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್‌ ದಾಖಲೆ ಶರ್ಮಾ ಮತ್ತು ಕೊಹ್ಲಿ ಹೆಸರಿನಲ್ಲಿತ್ತು. ಅದೀಗ ಆ ದಾಖಲೆ ಸಂಪೂರ್ಣ ಕೊಹ್ಲಿ ಪಾಲಾಗಿದೆ.
ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 7) ನಡೆದ ಭಾರತ-ಶ್ರೀಲಂಕಾ ದ್ವಿತೀಯ ಟಿ20ಐ ಪಂದ್ಯದಲ್ಲಿ ಕೊಹ್ಲಿ ವಿಶ್ವದಾಖಲೆ ಪೂರೈಸಿಕೊಂಡರು.

ಶ್ರೀಲಂಕಾ ವಿರುದ್ಧ ಭಾರತಕ್ಕೆ ಇನ್ನೊಂದು ಪಂದ್ಯವಿದ್ದು, ಕೊಹ್ಲಿ ಈ ದಾಖಲೆ ಯಾದಿಯಲ್ಲಿ ಮತ್ತಷ್ಟು ರನ್ ಹೆಚ್ಚಿಸಿಕೊಳ್ಳಲಿದ್ದಾರೆ. ಕೊಹ್ಲಿ ಬ್ಯಾಟಿಂಗ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಕುಲದೀಪ್ ಯಾದವ್ ಬೌಲಿಂಗ್‌ ನೆರವಿನೊಂದಿಗೆ ಇಂದೋರ್ ಪಂದ್ಯದಲ್ಲಿ ಭಾರತ 7 ವಿಕೆಟ್ ಸುಲಭ ಗೆಲುವನ್ನಾಚರಿಸಿತ್ತು.