ಪ್ರಧಾನಿ ಮೋದಿ ಭೇಟಿಯಿಂದಾಗಿ ರಸ್ತೆಗುಂಡಿಗಳಿಗೆ ತೇಪೆ: ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿ.

ಬೆಂಗಳೂರು,ನವೆಂಬರ್,11,2022(www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರು ಪ್ರವಾಸ ಕೈಗೊಂಡು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ವಂದೇ ಭಾರತ್ ರೈಲಿಗೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮಗಳನ್ನ ನೆರವೇರಿಸಿದರು.

ಈ ಮಧ್ಯೆ ಪ್ರಧಾನಿ ಮೋದಿ ಭೇಟಿ ನೀಡಿದ್ದಕ್ಕಾಗಿ ಬೆಂಗಳೂರಿನ ರಸ್ತೆಗುಂಡಿಗಳನ್ನ ಮುಚ್ಚಿದ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್ , ಅವರ ನಾಯಕರು ಬಂದು ಹೋಗಲು  ಬೆಂಗಳೂರು ರಸ್ತೆಗುಂಡಿಗಳನ್ನ ಮುಚ್ಚಿದ್ದಾರೆ. ಆದರೆ ಸಾರ್ವಜನಿಕರು ಓಡಾಡಲು ಮಾತ್ರ ರಸ್ತೆಗುಂಡಿಗಳನ್ನ  ಮುಚ್ಚಲ್ಲ. ನಮ್ಮ ಕಾರ್ಯಕರ್ತರು ಗುಂಡಿಗಳಿಗೆ ಪೂಜೆ ಮಾಡುತ್ತಾರೆ.  ಹೋಮ ಹವನ ಮಾಡ್ತಾರೆ ನೋಡ್ತಾ ಇರಿ ಎಂದು  ವಾಗ್ದಾಳಿ ನಡೆಸಿದರು.

Key words: Patching – road- pothole- PM Modi- visit- DK Shivakumar- against – government.