‘ಕವಲುದಾರಿ’ಗೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ

Promotion

ಬೆಂಗಳೂರು, ಮಾರ್ಚ್ 05, 2020 (www.justkannada.in): 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ‘ಕವಲುದಾರಿ’ (ನಿರ್ದೇಶಕ:ಹೇಮಂತ್ ಮುರುಳಿರಾವ್) ಸಿನಿಮಾ ಭಾಜನವಾಗಿದೆ.

‘ಒಂದು ಶಿಕಾರಿಯ ಕಥೆ'(ನಿ:ಸಚಿನ್ ಶೆಟ್ಟಿ), ‘ರಂಗನಾಯಕಿ'(ನಿ:ದಯಾಳ್ ಪದ್ಮನಾಭನ್) ಸಿನಿಮಾಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿವೆ.

ತೀರ್ಪುಗಾರರ ಮೆಚ್ಚುಗೆಯ ಪ್ರಶಸ್ತಿಗೆ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ (ನಿ: ಆರ್.ಮಧುಚಂದ್ರ) ಸಿನಿಮಾ ಆಯ್ಕೆಯಾಗಿದೆ. ವರ್ಷದ ಅತ್ಯುತ್ತಮ ಜನಪ್ರಿಯ ಕನ್ನಡ ಚಲನಚಿತ್ರ ಪ್ರಶಸ್ತಿಗೆ ‘ಮುನಿರತ್ನ ಕುರುಕ್ಷೇತ್ರ'(ನಿ:ನಾಗಣ್ಣ) ಆಯ್ಕೆಯಾದರೆ, ‘ಬೆಲ್ ಬಾಟಂ’ (ನಿ:ಬಿ.ವಿ.ಜಯತೀರ್ಥ) ಮತ್ತು ‘ಯಜಮಾನ'(ನಿ:ವಿ.ಹರಿಕಷ್ಣ, ಪೊನ್ ಕುಮಾರನ್‌) ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಜನಪ್ರಿಯ ಸಿನಿಮಾ ಪ್ರಶಸ್ತಿ ಪಡೆದವು.

ಚಿತ್ರಭಾರತಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಪಂಗ್ರುನ್'(ನಿ:ಮಹೇಶ್‌ ವಾಮನ್ ಮಂಜ್ರೇಕರ್‌) ಭಾಜನವಾಗಿದೆ. ತೀರ್ಪುಗಾರರ ವಿಶೇಷ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಬಿರ್ಯಾನಿ(ನಿ:ಸಜಿನ್ ಬಾಬು) ಮತ್ತು ‘ಜ್ವಾಲ್ವಿ(ದಿ ಸೀಡ್)(ನಿ:ರಜನಿ ಬಸುಮತ್ರೆ)’ ಚಿತ್ರಗಳು ಆಯ್ಕೆಯಾಗಿವೆ.