ಅಪ್ಪು ಸಾವು : ಹಾಸನಾಂಬೆಗೆ ಪತ್ರ ಬರೆದು ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿ

Karnataka-Hassan-puneeth.rajkumar-hasanabhe-letter-politics

 

ಹಾಸನ, ನ.08, 2021 : (www.justkannada.in news ) ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೃತರಾಗಿ ವಾರ ಕಳೆದರು, ಅಪ್ಪು ಮೇಲಿನ ಅಭಿಮಾನ ಮಾತ್ರ ದಿನೇದಿನೇ ಹೆಚ್ಚುತ್ತಲೇ ಇದೆ. ಅಭಿಮಾನಿಗಳ ಅಭಿಮಾನಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ.

ಈ ನಡುವೆ, ಅಪ್ಪು ಅಭಿಮಾನಿಯೊಬ್ಬ, ನಟ ಪುನೀತ್ ಸಾವಿಗೆ ಆಕ್ಷೇಪ ವ್ಯಕ್ತಪಡಿಸಿ ದೇವರಿಗೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ಭ್ರಷ್ಟ ರಾಜಕಾರಣಿಗಳನ್ನು ಬದುಕಲು ಬಿಟ್ಟು ಅಪ್ಪು ಸಾವಿಗೆ ಆತುರ ತೋರಿದ ಬಗೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿರುವುದು ಪತ್ತೆಯಾಗಿದೆ.
ಈ ಪತ್ರ ಹಾಸನದ ಹಾಸನಾಂಬೆ ದೇವಾಲಯದ ಹುಂಡಿಯಲ್ಲಿ ಪತ್ತೆಯಾಗಿದ್ದು, ಪುನೀತ್ ರಾಜ್ ಕುಮಾರ್ ನಿಧನದ‌ ಬಗ್ಗೆ ಹಾಸನಾಂಬೆ ದೇವಿಗೆ ಕಾಗದ ಬರೆದಿರುವ ಅಭಿಮಾನಿ ಪತ್ರದ ಸಾರಾಂಶ ಹೀಗಿದೆ…

‘ ಅಮ್ಮ ಆ ಧರ್ಮಾತ್ಮ‌ ಪುನೀತ್ ರಾಜ್‍ಕುಮಾರ್ ಸಾಯುವುದರ ಬದಲು, ಈ‌ ರಾಜಕೀಯದಲ್ಲಿ ನಾಟಕವಾಡಿ ಅವರು ತಿಂದು,‌ ಅವರ ಮರಿಮೊಮ್ಮಕ್ಕಳು ತಿಂದು ತೇಗಿದರು ಕರಗದ ಆಸ್ತಿ ಮಾಡಿ, ಸಭೆಗಳಲ್ಲಿ ನಾಟಕವಾಡುತ್ತಾರಲ್ಲಾ ಅಂಥಾ ಬೇ_ _ ರಾಜಕಾರಣಿಗಳನ್ನು ಸಾಯಿಸು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುತ್ತದೆ,‌ ಬಡವರು ಕರ್ನಾಟಕದಲ್ಲಿ ಸುಖವಾಗಿರುತ್ತಾರೆ.

ನಿನ್ನೆ,‌ ಮೊನ್ನೆ ಬಂದ ಈ ಕೆಲ‌ ರಾಜಕಾರಣಿಗಳು ಕೋಟಿ ಕೋಟಿ ಆಸ್ತಿ ಮಾಡಿಕೊಂಡು ಬೀಗುತ್ತಾರಲ್ಲ, ಅವರಿಗೆ ಕರ್ಮದ ಸಾವು ಬರಲಿ. ಪಾಪ ಪುನೀತ್ ಇದ್ದಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಇರುತ್ತಿದ್ದರು ತಾಯಿ. ಪುನೀತ್ ಸಾವಿಗೆ ಮರುಗಿ, ರಾಜಕಾರಣಿಗಳಿಗೆ ಶಾಪ ಹಾಕಿರುವ ಪತ್ರ ಹುಂಡಿಯಲ್ಲಿ ಪತ್ತೆ.

 

key words : Karnataka-Hassan-puneeth.rajkumar-hasanabhe-letter-politics

ENGLISH SUMMARY…

‘Appu’s’ demise: Fan expresses ire against politicians by writing a letter to goddess ‘Hassanambe’

Hassan, November 8, 2021 (www.justkannada.in): Eleven days have passed after the demise of Sandalwood star Puneeth Rajkumar. But the sorrow and love for him among his fans is constantly increasing. It appears it will continue forever.

Expressing his deep displeasure and grief for the demise of the Power Star, one of his fans has written a letter to the goddess ‘Hassanamba’, mentioning his objection to taking away his favorite star instead of the corrupt politicians.

This letter was found in the Hassanamba temple hundi in Hassan. The letter by ‘Appu’s’ fan is as follows:

“Goddess Hassanambe, Puneeth Rajkumar was such a noble and nice guy. Instead of him, you should have taken the lives of corrupt politicians who are amassing huge wealth by misusing public money. Our State will develop, and the poor will be happy.”

Keywords: Appu/ Puneeth Rajkumar/ Fan/ Hassan/ Hassanambe temple