7 ಭಾಷೆಗಳಲ್ಲಿ ಡಬ್ಬಿಂಗ್ ಶುರು ಮಾಡಿದ ಕಬ್ಜ ಟೀಂ

ಬೆಂಗಳೂರು, ಜೂನ್ 08, 2022 (www.justkannada.in): ಸಿನಿಮಾ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಸಿನಿಮಾ ‘ಕಬ್ಜ’ ಸಿನಿಮಾ ಬಿಡುಗಡೆಗೆ ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇನ್ನೊಂದು ಕಡೆ ಏಳು ಭಾಷೆಯಲ್ಲಿ ‘ಕಬ್ಜ’ ಸಿನಿಮಾ ಬಿಡುಗಡೆಯಾಗಲಿದೆ ಎಂದು ಈ ಹಿಂದೆಯೇ ಆರ್ ಚಂದ್ರು ಹೇಳಿದ್ದಾರೆ. ಅದರಂತೆ ಡಬ್ಬಿಂಗ್ ಕೆಲಸ ಶುರು ಮಾಡಲಾಗಿದೆ.

ವಿಶೇಷ ಎಂದರೆ ಏಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಿದು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಜೊತೆಗೆ ಮರಾಠಿ ಹಾಗೂ ಬೆಂಗಾಲಿ ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ.

‘ಕಬ್ಜ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇ ಬಾರಿಗೆ ಸುದೀಪ್ ಹಾಗೂ ಉಪೇಂದ್ರ ಕಾಂಬಿನೇಷನ್ ಪ್ರೇಕ್ಷಕರಿಗೆ ಕಿಕ್ ಕೊಡಲಿದೆ.