Wednesday, September 30, 2026

BDA Apartments

ಹೈದ್ರಬಾದ್ ರಸ್ತೆ ಅಪಘಾತ : ಮೃತಪಟ್ಟ ರಾಯಚೂರಿನ 7 ಜನರ ಗುರುತು ಪತ್ತೆ BDA JK_Adv BDA Adv
Home Crime ಹೈದ್ರಬಾದ್ ರಸ್ತೆ ಅಪಘಾತ : ಮೃತಪಟ್ಟ ರಾಯಚೂರಿನ 7 ಜನರ ಗುರುತು ಪತ್ತೆ.

ಹೈದ್ರಬಾದ್ ರಸ್ತೆ ಅಪಘಾತ : ಮೃತಪಟ್ಟ ರಾಯಚೂರಿನ 7 ಜನರ ಗುರುತು ಪತ್ತೆ.

 

ರಾಯಚೂರು, ಮಾ.28, 2020 : (www.justkannada.in news ) ಹೈದರಾಬಾದ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಯಚೂರು ನಿವಾಸಿಗಳ ಗುರುತು ಪತ್ತೆಯಾಗಿದೆ.

ದುಡಿಯಲು ಹೋಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಲ್ಲಿಂದ ಮರಳಿ ಸ್ವಗ್ರಾಮಕ್ಕೆ ಹಿಂದಿರುತ್ತಿದ್ದ ವೇಳೆ ಈ ಅಪಘಾಥ ಸಂಭವಿಸಿ ಏಳು ಜನ ಮೃತಪಟ್ಟಿದ್ದರು. ಹೈದ್ರಾಬಾದ್ ಸಮೀಪದ ಶಂಶಾಬಾದ್ ರಿಂಗ್ ರೋಡ್ ನಲ್ಲಿ ಸಂಬವಿಸಿದ್ದ ಅಪಘಾತ.

raichur-road-accident-7-dead-police

ಮೃತರನ್ನು ಸುರಪೂರ ತಾಲೂಕಿನ ಬಸಮ್ಮ ಕಕ್ಕೇರಿ, ಹನುಮಂತ ಕಕ್ಕೇರಿ, ಲಿಂಗಸಗೂರಿನ ಶ್ರೀದೇವಿ ರಾಯದುರ್ಗ,ರಂಗಪ್ಪ ರಾಯದುರ್ಗ, ಶರಣಪ್ಪ ರಾಯದುರ್ಗ, ಅಮರಪ್ಪ ರಾಯದುರ್ಗ, ದೇವದುರ್ಗ ತಾಲೂಕಿನ ಕೊಳ್ಳಪ್ಪ ಚಿಂಚರಕಿ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಯಚೂರು ಎಸ್.ಪಿ‌ ಡಾ.ವೇದಮೂರ್ತಿ ಮಾಹಿತಿ.

ಶಂಶಾಬಾದ್ ರಿಂಗ್ ರೋಡ್ ನಲ್ಲಿ ಕೆಟ್ಟು ನಿಂತ ಬೊಲೆರೋ ವಾಹನ ರಿಪೇರಿ ಮಾಡುವಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ . ಪರಿಣಾಮ ಸ್ಥಳದಲ್ಲಿಯೇ ನಾಲ್ವರ ದುರ್ಮರಣ. ಇನ್ನೂ ಮೂವರನ್ನು ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದಾಗ ಆಸ್ಪತ್ರೆಯಲ್ಲಿಯೇ ಸಾವು.

 

key words : raichur-road-accident-7-dead-police