ಕೆ. ಎಸ್. ನರಸಿಂಹಸ್ವಾಮಿ ಕಂಚಿನ ಪ್ರತಿಮೆ ಅನಾವರಣ: ಬೆಂಗಳೂರು ಒನ್ ಕೇಂದ್ರ” ಲೋಕಾರ್ಪಣೆ…

ಬೆಂಗಳೂರು,ಸೆಪ್ಟಂಬರ್ ,8,2020(www.justkannada.in): ಬಿಬಿಎಂಪಿ ಯಡಿಯೂರು ವಾರ್ಡ್ ವ್ಯಾಪ್ತಿಯ ಬಸವನಗುಡಿ ಬಡಾವಣೆಯ ಎಂ.ಎನ್.ಕೆ. ಉದ್ಯಾನವನದ ಮುಂಭಾಗದಲ್ಲಿ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿರುವ ಮೈಸೂರು ಮಲ್ಲಿಗೆ ಖ್ಯಾತಿಯ “ಕೆ. ಎಸ್. ನರಸಿಂಹಸ್ವಾಮಿ”ಯವರ ಕಂಚಿನ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಯಿತು.

ಸುಮಾರು 03 ಲಕ್ಷ ರೂಪಾಯಿ ವೆಚ್ಛದಲ್ಲಿ ಪಾಲಿಕೆಯ ಅನುದಾನದಿಂದ ಇದನ್ನು ನಿರ್ಮಿಸಲಾಗಿದ್ದು, ಮಹಾಕವಿಗೆ ಗೌರವ ಸಮರ್ಪಣೆ ಮಾಡುವ ಸದುದ್ದೇಶದಿಂದ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಹಾಗೆಯೇ ಶಾಸ್ತ್ರೀನಗರ ಬಡಾವಣೆಯ 4ನೇ ಮುಖ್ಯರಸ್ತೆಯಲ್ಲಿ ಪಾಲಿಕೆಯ ವತಿಯಿಂದ “ಬೆಂಗಳೂರು ಒನ್ ಕೇಂದ್ರ”ವನ್ನು ನಿರ್ಮಿಸಲಾಗಿದ್ದು, ಇಂದು ಲೋಕಾರ್ಪಣೆ ಮಾಡಲಾಯಿತು.k-s-narasimhaswamy-statu-bangalore-one-center-innaugrate-minister-r-ashok

ರಾಜ್ಯದ ಕಂದಾಯ ಸಚಿವರಾದ. ಆರ್. ಅಶೋಕ್ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ. ತೇಜಸ್ವಿ ಸೂರ್ಯ  ಅವರು ಇಂದು “ಕೆ. ಎಸ್. ನರಸಿಂಹಸ್ವಾಮಿ”ಯವರ “ಕಂಚಿನ ಪುತ್ಥಳಿ”ಯನ್ನು ಮತ್ತು “ಬೆಂಗಳೂರು ಒನ್ ಕೇಂದ್ರ”ದ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ. ಎನ್. ಆರ್ ರಮೇಶ್ ರವರು ಸೇರಿದಂತೆ ನೂರಾರು ಮಂದಿ ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: K. S Narasimhaswamy – Statu- Bangalore One Center –innaugrate-minister- R.Ashok