ಕಿರಿಯರ ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್’ಗೆ ಟೀಂ ಇಂಡಿಯಾ ಬಾಯ್ಸ್ !

ಪೊಚೆಫ್‌ಸ್ಟ್ರೂಮ್, ದಕ್ಷಿಣ ಆಫ್ರಿಕಾ, ಜನವರಿ 29, 2019 (www.justkannada.in): ಸೆನವ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಅಂಡರ್​​​​ 19 ವರ್ಲ್ಡ್​​ಕಪ್​ನ ಮೊದಲ ಕ್ವಾರ್ಟರ್ ಫೈನಲ್ಸ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಭಾರತ, ಸೆಮಿ ಫೈನಲ್​ಗೆ ಲಗ್ಗೆ ಇಟ್ಟಿದೆ.

ಟೀಂ ಇಂಡಿಯಾ 9 ವಿಕೆಟ್​ ನಷ್ಟಕ್ಕೆ 50 ಓವರ್​​ಗಳಲ್ಲಿ 233 ರನ್​​ ಕಲೆ ಹಾಕಿದ್ರೆ, ಆಸ್ಟ್ರೇಲಿಯಾ 43.3 ಓವರ್​​ಗಳಲ್ಲಿ 159 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ಗಳನ್ನ ಕೈಚೆಲ್ಲಿ ಭಾರತದೆದುರು ಮಂಡಿಯೂರಿತು.

ಟೀಂ ಇಂಡಿಯಾದ ಯಶಸ್ವಿ ಜೈಸ್ವಾಲ್​ 62 ರನ್​ ಸಿಡಿಸಿದ್ರೆ, ಅಥರ್ವ ಅಂಕೋಲೆಕರ್​​​ 55 ರನ್​​ ಗಳಿಸಿದ್ರು. ಯುವ ವೇಗಿ ಕಾರ್ತಿಕ್ ತ್ಯಾಗಿ 4 ವಿಕೆಟ್​ಗಳನ್ನ ಪಡೆಯುವ ಮೂಲಕ 74 ರನ್​ಗಳ ಅಂತರದಿಂದ ಪಂದ್ಯ ಗೆಲ್ಲಲು ನೆರವಾದರು.