ದಂಡ ಕಟ್ಟಲು ಹಿಂದೆ ಮುಂದೆ ನೋಡುತ್ತಿರುವ ಕೆಎಸ್’ಸಿಎಗೆ ಬೀಗ ಜಡಿಯಲು ಬಿಬಿಎಂಪಿ ಸಿದ್ಧತೆ

ಬೆಂಗಳೂರು, ಜನವರಿ 29, 2019 (www.justkannada.in): ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.

50 ಸಾವಿರ ದಂಡ ಪಾವತಿಸಲು ಹಿಂದೇಟು ಹಾಕುತ್ತಿರುವ ಕೆಎಸ್‍ಸಿಎಗೆ ಬಿಬಿಎಂಪಿ ಇನ್ನೆರಡು ದಿನಗಳಲ್ಲಿ ಬೀಗ ಮುದ್ರೆ ಹಾಕಲು ಮುಂದಾಗಿದೆ.

ಭಾರತ ಹಾಗೂ ಆಸ್ಟ್ರೇಲಿಯ ನಿರ್ಣಾಯಕ ಪಂದ್ಯದ ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಆರೋಪದಡಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಿಬಿಎಂಪಿಯಿಂದ 50 ಸಾವಿರ ದಂಡ ವಿಧಿಸಲಾಗಿತ್ತು.

ಕ್ರೀಡಾಂಗಣದ ಒಳಗಡೆ ಇದ್ದ ಕ್ಯಾಂಟೀನ್‍ಗಳಲ್ಲಿ ಪ್ಲಾಸ್ಟಿಕ್ ಕಪ್ ಬಳಕೆ ಆರೋಪದದ ಹಿನ್ನೆಲೆಯಲ್ಲಿ ಬಿಬಿಎಂಪಿ ಉಪ ಆರೊಗ್ಯಾಧಿಕಾರಿ ಸಂಗಮಿತ್ರ ಅವರು 50 ಸಾವಿರ ರೂ. ದಂಡ ವಿಧಿಸಿದ್ದರು.

ಆದರೆ ಇಲ್ಲಿಯವರೆಗೆ ದಂಡ ಪಾವತಿ ಮಾಡದೆ ಪಾಲಿಕೆಯ ನೋಟಿಸ್‍ಗೂ ಉತ್ತರ ನೀಡದೆ ಕೆಎಸ್‍ಸಿಎ ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಡೋಂಟ್ ಕೇರ್ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.