ಶ್ರೀನಿ ‘ಓಲ್ಡ್ ಮಂಕ್’ಗೆ ಅದಿತಿ ನಾಯಕಿ !

ಬೆಂಗಳೂರು, ಜನವರಿ 29, 2019 (www.justkannada.in): ನಿರ್ದೇಶಕ ಶ್ರೀನಿ ಅವರ ಮುಂದಿನ ಸಿನಿಮಾ ‘ಓಲ್ಡ್‌ ಮಾಂಕ್‌’ನಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಆಯ್ಕೆಯಾಗಿದ್ಧಾರೆ.

ಶ್ರೀನಿವಾಸ ಕಲ್ಯಾಣ’, ‘ಬೀರ್​ಬಲ್’ ಸಿನಿಮಾಗಳಿಗೆ ಆಕ್ಷನ್-ಕಟ್ ಹೇಳಿ ನಾಯಕನಾಗಿಯೂ ಅಭಿನಯಿಸಿದ್ದ ಶ್ರೀನಿವಾಸ್ ಅವರ ನಿರ್ದೇಶನದ ಹೊಸ ಸಿನಿಮಾ.

ಈ ಸಿನಿಮಾದಲ್ಲೂ ಶ್ರೀನಿ ನಿರ್ದೇಶನ ಮಾಡುವ ಜತೆಗೆ ನಾಯಕರಾಗಿಯೂ ಅಭಿನಯಿಸಲಿದ್ದಾರೆ. ಇತ್ತೀಚೆಗಷ್ಟೇ ‘ಓಲ್ಡ್​ಮಾಂಕ್’ ಚಿತ್ರದ ಬಗ್ಗೆ ಘೋಷಣೆ ಮಾಡಿದ್ದ ಶ್ರೀನಿ, ಕೆಲವು ದಿನಗಳಿಂದ ರಾಜ್ಯದ ಕೆಲವೆಡೆ ಆಡಿಷನ್ ಮಾಡಿ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಸಿದ್ದರು.

ಈ ಮಧ್ಯೆ ನಾಯಕಿಯ ಪಾತ್ರಕ್ಕೆ ಒಂದಷ್ಟು ಆಯ್ಕೆಗಳನ್ನು ಗಮನಿಸಿದ್ದ ಅವರು ಅಂತಿಮವಾಗಿ ಅದಿತಿ ಪ್ರಭುದೇವ ಅವರನ್ನು ತಮ್ಮ ಜೋಡಿ ಆಗಿಸಿಕೊಳ್ಳಲು ತೀರ್ವನಿಸಿದ್ದಾರೆ.