ಪತ್ರಕರ್ತ ರವಿ ಬೆಳಗೆರೆ ನಿಧನ : ಡಾ.ಎಂ.ಎನ್. ನಂದೀಶ್ ಹಂಚೆ ಸಂತಾಪ

ಮೈಸೂರು,ನವೆಂಬರ್,13,2020(www.justkannada.in) : ಕನ್ನಡದ ಹಿರಿಯ ಪತ್ರಕರ್ತ, ಸಾಹಿತಿ, ರವಿ ಬೆಳಗೆರೆ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಸಂತಾಪಸೂಚಿಸಿದ್ದಾರೆ.kannada-journalist-media-fourth-estate-under-lossಕನ್ನಡ ಪತ್ರಿಕೋದ್ಯಮಕ್ಕೆ  ಹೊಸ ಆಯಾಮ ನೀಡಿದ ಪತ್ರಕರ್ತರಲ್ಲಿ ರವಿ ಬೆಳಗೆರೆ ಪ್ರಮುಖರು. ಪತ್ರಿಕೋದ್ಯಮ ಮತ್ತು ಎಲೆಕ್ಟ್ರಾನಿಕ್ ಮಾದ್ಯಮದ ಎಲ್ಲಾ ಸಾಧ್ಯತೆಗಳನ್ನು ತಮ್ಮ ಪ್ರಯೋಗಕ್ಕೆ ಒಗ್ಗಿಸಿಕೊಂಡವರು ಎಂದು ರವಿ ಬೆಳಗರೆಯವರ ಸೇವೆಯನ್ನು ಸ್ಮರಿಸಿದ್ದಾರೆ.

ಪತ್ರಕರ್ತರೊಬ್ಬರಿಗೆ ಅತಿ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂಬುದನ್ನು ತೋರಿಸಿಕೊಟ್ಟವರು ರವಿ ಬೆಳಗೆರೆ. ಅವರೊಬ್ಬ ಅಕ್ಷರ ಮಾಂತ್ರಿಕ. ಬರಹದ ದೈತ್ಯ. ಇವು ಕೇವಲ ಅಲಂಕಾರಿಕ ಮಾತುಗಳಲ್ಲ. ಅದೇ ರೀತಿ ಜೀವಿಸಿ ತೋರಿಸಿದವರು ರವಿ ಬೆಳಗೆರೆ. ಕನ್ನಡ ಪುಸ್ತಕ ಲೋಕಕ್ಕೆ 50ಕ್ಕೂ ಹೆಚ್ಚು ಕೃತಿಗಳನ್ನು ಕಾಣಿಕೆಯಾಗಿ ನೀಡಿದವರು ಎಂದು ನೆನೆದಿದ್ದಾರೆ.

ಚಲನಚಿತ್ರ, ಟಿ.ವಿ., ಬುಕ್ ಶಾಪ್ ಗಳ  ಹೊರತಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಸಹ ತಮ್ಮ ಪ್ರಯೋಗಶೀಲತೆಯನ್ನ ಓರೆಗೆ ಹಚ್ಚಿದವರು. ಇಂತಹ  ಅಪೂರ್ವ ಬರಹಗಾರನ ನಿರ್ಗಮನದಿಂದ ಕನ್ನಡ ಸಾಹಿತ್ಯ ಲೋಕ ಹಾಗೂ ಪುಸ್ತಕ ಲೋಕ ಬಹಳ ದೊಡ್ಡ ನಷ್ಟ ಅನುಭವಿಸಿದೆ. ರವಿ ಬೆಳಗೆರೆಯಂತಹ ಸೂಜಿಗಲ್ಲಿನ ಸೆಳೆತ ಉಳ್ಳ ಬರಹಗಾರರು ಮತ್ತೆ ಕನ್ನಡ ಸಾಹಿತ್ಯ ಲೋಕದಲ್ಲಿ ಕಂಡು ಬರುವುದು ವಿರಳ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಪ್ರಾರ್ಥಿಸಿದ್ದಾರೆ.

Journalist-Ravi Belagere-dies-Dr.M.N.NandishHanchea-condolences

key words :Journalist-Ravi Belagere-dies-Dr.M.N.Nandish
Hanchea-condolences