ಈರುಳ್ಳಿ ಬೆಲೆ ಏರಿಕೆಗೆ ಖಂಡನೆ: ದೀಪಾವಳಿ ಹಬ್ಬದಲ್ಲಿ ವಿನೂತನ ಪ್ರತಿಭಟನೆಗೆ ಮುಂದಾದ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕ…

ಮೈಸೂರು,ನವೆಂಬರ್,13,2020(www.justkannada.in):  ಈರುಳ್ಳಿ ಬೆಲೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನ ಖಂಡಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕ ವಿನೂತನ ಪ್ರತಿಭಟನೆಗೆ ಮುಂದಾಗಿದೆ.kannada-journalist-media-fourth-estate-under-loss

ಈರುಳ್ಳಿ ಬೆಲೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನ ಖಂಡಿಸಿ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಉಡುಗೊರೆ ರೂಪದಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ ಈರುಳ್ಳಿ ಕಳುಹಿಸುವ ಮೂಲಕ ವಿನೂತನ ಪ್ರತಿಭಟನೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕ ನಿರ್ಧಾರ ಮಾಡಿದೆ.condemns-onion-price-rise-state-womens-congress-decided-protest-diwali-mysore

ಪ್ರತಿಭಟನೆ ಕುರಿತು ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ , ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಖುದ್ದಾಗಿ ಅಥವಾ ನಾಯಕರುಗಳ ಹೆಸರುಗಳನ್ನು ಅಂಟಿಸಿ ಪೋಸ್ಟ್ ಮೂಲಕ ಈರುಳ್ಳಿ ರವಾನಿಸಲು ತೀರ್ಮಾನ ಮಾಡಲಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಉಡುಗೊರೆ ರೂಪದಲ್ಲಿ ಈರುಳ್ಳಿ ಕಳುಹಿಸಿ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.Condemns- onion price –rise-State women's -congress – decided- protest –Diwali-mysore

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯನ ಬಾಳು ಹೈರಾಣಾಗಿದೆ. ಬಿಜೆಪಿ ನಾಯಕರುಗಳಿಗೆ ಅವಮಾನವಾಗಲೆಂದೇ ಈರುಳ್ಳಿಯನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಕಳುಹಿಸುತ್ತಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.

Key words: Condemns- onion price –rise-State women’s -congress – decided- protest –Diwali-mysore