ಅಕ್ಕ ಶೋಭಕ್ಕ ಇನ್ನು ಏಕೆ ಇದರ ಬಗ್ಗೆ ಮಾತನಾಡಿಲ್ಲ..?– ವ್ಯಂಗ್ಯವಾಗಿ ಪ್ರಶ್ನಿಸಿದ ಡಾ.ಪುಷ್ಪಾ ಅಮರನಾಥ್…

ಮೈಸೂರು,ನವೆಂಬರ್,13,2020(www.justkannada.in): ತೇರದಾಳ ಶಾಸಕ ಸಿದ್ದು ಸವದಿ ಕಾಂಗ್ರೆಸ್ ಪಕ್ಷದ ಮಹಿಳೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆಕೂಡಲೇ ತಪ್ಪಿತಸ್ಥರನ್ನ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆಗ್ರಹಿಸಿದ್ದಾರೆ.kannada-journalist-media-fourth-estate-under-loss

ಮೈಸೂರಿನಲ್ಲಿ ಇಂದು ಮಾತನಾಡಿದ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ತೇರದಾಳ ಶಾಸಕ ಸಿದ್ದು ಸವದಿ ಕಾಂಗ್ರೆಸ್ ಪಕ್ಷದ ಮಹಿಳೆಯ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು. ಅಕ್ಕ ಶೋಭಕ್ಕ ಇನ್ನು ಏಕೆ ಇದರ ಬಗ್ಗೆ ಮಾತನಾಡಿಲ್ಲ..? ನೀವೊಬ್ಬರು ಹೆಣ್ಣು ಮಗಳಾಗಿದ್ದರೂ ಏಕೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.  ಬೇರೆ ವಿಚಾರಗಳಿಗೆ ಧಿಡೀರ್ ಪ್ರತಿಕ್ರಿಯೆ ನೀಡುತ್ತೀರಾ. ಮಹಿಳೆಯರ ವಿಚಾರದಲ್ಲಿ ಏಕೆ ಈ ನಿರ್ಧಾರವಿಲ್ಲ ಎಂದು ಪ್ರಶ್ನಿಸಿದರು.

ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಪಕ್ಷ ಯಾವುದಾದರೂ ಇರಲಿ ಮಹಿಳೆಯರ ಸಮಸ್ಯೆಗಳಿಗೆ ಮೊದಲು ಸ್ಪಂದಿಸಬೇಕು. ಮಹಿಳಾ ದೌರ್ಜನ್ಯದ ವಿರುದ್ಧ ದನಿ ಎತ್ತುವಂತೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆಗೆ ಪುಷ್ಪಾ ಅಮರನಾಥ್ ಮನವಿ ಮಾಡಿದರು.Condemns- onion price –rise-State women's -congress – decided- protest –Diwali-mysore

ಈ ಘಟನೆ ನಡೆದು ನಾಲ್ಕು ದಿನಗಳೇ ಕಳೆದಿವೆ. ಇನ್ನೂ ಸಹ ಯಾವುದೇ ರೀತಿಯ ಕ್ರಮ ಆಗಿಲ್ಲ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ..? ಕೂಡಲೇ ತಪ್ಪಿತಸ್ಥರನ್ನ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುಷ್ಪಾ ಅಮರನಾಥ್ ಆಗ್ರಹಿಸಿದರು.

Key words: Municipal councilor -assaulted –MLA- Sidhu Sawadi-action-  Dr. Pushpa Amarnath