ತಕ್ಷಣವೇ ಉಕ್ರೇನ್ ರಾಜಧಾನಿ ಕೀವ್  ತೊರೆಯುವಂತೆ ಭಾರತೀಯರಿಗೆ ಸೂಚನೆ.

ಕೀವ್,ಮಾರ್ಚ್,1,2022(www.justkannada.in): ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಮುಂದುರೆದಿದ್ದು, ಉಕ್ರೇನ್​ನಲ್ಲಿ ಸಿಲುಕಿರುವ ಜನರ ಪಾಡು ಹೇಳಿತೀರದಂತಿದೆ.  ಅಲ್ಲಿಂದ ತಪ್ಪಿಸಿಕೊಂಡು ಬರುತ್ತಿರುವವರ ಜೀವನ ಅಕ್ಷರಶಃ ನರಕವಾಗಿದೆ. ಜೀವ ಉಳಿಸಿಕೊಳ್ಳುವ ಆಸೆಯಿಂದ ಗಡಿ ದಾಟಿ ಬರುವವರಿಗೂ ಸಂಕಷ್ಟ ತಪ್ಪಿದ್ದಲ್ಲ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.

ಈ ಮಧ್ಯೆ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ದಾಳಿ ನಡೆಸಿ ಯಾವ ಕ್ಷಣದಲ್ಲಾದರೂ ವಶಕ್ಕೆ ಪಡೆಯಬಹುದು. ಹೀಗಾಗಿ ಕೀವ್ ನಲ್ಲಿರುವ ಭಾರತೀಯರು ತಕ್ಷಣವೇ  ಕೀವ್ ತೊರಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.

ಅಲ್ಲದೆ ಈ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ   ಭಾರತೀಯರ ಸ್ಥಳಾಂತರಕ್ಕೆ ವಾಯುಸೇನೆಯನ್ನ ಕಳುಹಿಸಿದೆ. ಉಕ್ರೇನ್ ರಾಜಧಾನಿ ಕೀವ್​ ಮೇಲಿನ ದಾಳಿಗೆ  ರಷ್ಯಾ ಸೇನೆ ಸಿದ್ಧತೆ ಮಾಡಿಕೊಂಡಿದೆ. ನಗರದಿಂದ ಹೊರಗೆ ಹೋಗಬೇಕು ಎಂದು ಜನರಿಗೆ ರಷ್ಯಾ ಸೇನೆ ತಾಕೀತು ಮಾಡುತ್ತಿದೆ. ಈ ನಡುವೆ ವಿಶ್ವದ ಹಲವು ದೇಶಗಳು ಉಕ್ರೇನ್​ಗೆ ನೆರವು ಘೋಷಿಸಿವೆ.

Key words: Indians – leave- Ukraine-Kiev