ಭಾರತ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ಎಂದ ಇಂಜಮಾಮ್-ಉಲ್-ಹಕ್

ಬೆಂಗಳೂರು, ಅಕ್ಟೋಬರ್ 21, 2021 (www.justkannada.in): ಐಸಿಸಿ ಟಿ20 ವಿಶ್ವಕಪ್ 2021 ಗೆಲ್ಲುವ ನೆಚ್ಚಿನ ತಂಡ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.

ಯುಎಇ ಮತ್ತು ಒಮನ್ ಪರಿಸ್ಥಿತಿಗಳಿಂದಾಗಿ ಭಾರತ 2021 ರ ಟಿ20 ವಿಶ್ವಕಪ್ ಗೆಲ್ಲುವ ಹೆಚ್ಚಿನ ಅವಕಾಶವಿದೆ. ಯಾವುದೇ ಪಂದ್ಯಾವಳಿಯಲ್ಲಿ, ಒಂದು ನಿರ್ದಿಷ್ಟ ತಂಡವು ಗೆಲ್ಲುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ ಎಂದು ನಾಯಕ ಇಂಜಮಾಮ್-ಉಲ್-ಹಕ್ ಭವಿಷ್ಯ ನುಡಿದಿದ್ದಾರೆ.

ಈ ಟೂರ್ನಿಯಲ್ಲಿ ಗೆಲ್ಲುವ ಇತರ ತಂಡಗಳಿಗಿಂತ ಭಾರತಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.

ಇನ್ನು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ತಮ್ಮ ಎರಡೂ ವಾರ್ಮ್-ಅಪ್ ಪಂದ್ಯಗಳನ್ನು ಆರಾಮವಾಗಿ ಗೆಲ್ಲುವ ಮೂಲಕ ಭಾರತದ ಆತ್ಮವಿಶ್ವಾಸ ಹೆಚ್ಚಾಗಿದೆ.