ಚಿಕ್ಕಬಳ್ಳಾಪುರದಲ್ಲಿ ಸ್ಪೋಟ ಪ್ರಕರಣ: ಪಿಎಸ್ ಐ ಸಸ್ಪೆಂಡ್…

ಚಿಕ್ಕಬಳ್ಳಾಪುರ,ಫೆಬ್ರವರಿ,24,2021(www.justkannada.in):  ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆ ಪಿಎಸ್ ಐ  ಗೋಪಾಲ ರೆಡ್ಡಿ ಅವರನ್ನ ಅಮಾನತು  ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಕ್ವಾರಿಯ ಮೇಲೆ ದಾಳಿ ನಡೆದ ನಂತರ ಆರೋಪಿಗಳನ್ನು ದಸ್ತಗಿರಿ  ಮಾಡಲು   ಪಿಎಸ್ ಐ  ಗೋಪಾಲ ರೆಡ್ಡಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಪ್ರಕರಣ ದಾಖಲಿಸಿದ ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲಿ ನಮೂದಿಸಿಲ್ಲ. ಪ್ರಕರಣದ ತನಿಖೆ ನಡೆಸದೇ ಫೆ. 21 ಮತ್ತು 22 ರಂದು ರಜೆ ಮೇಲೆ ತೆರಳಿರುತ್ತೀರಿ. ಅರೋಪಿಗಳನ್ನು ದಸ್ತಗಿರಿ ಮಾಡದೇ ಇದ್ದಿದ್ದರಿಂದ ಈ ಸ್ಪೋಟ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.

Explosion -case- Chikkaballapur-PSI -suspend.
ಕೃಪೆ-internet

ಆರೋಪಿ ನಾಗರಾಜ ಸೂಚನೆ ಮೇರೆಗೆ ಅಕ್ಕಿ ಚೀಲದಲ್ಲಿ ಸ್ಪೋಟಕ ಸಾಗಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿ 6 ಜನ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವಂತೆ ಅಧೀನ ಸಿಬ್ಬಂದಿಗೂ ಸೂಚನೆ ನೀಡಿಲ್ಲ. ಆರೋಪಿಗಳನ್ನು ಸೂಕ್ತ ಸಂದರ್ಭದಲ್ಲಿ ದಸ್ತಗಿರಿ ಮಾಡಿದ್ದರೆ ಈ ಸ್ಫೋಟ ಪ್ರಕರಣ ಸಂಭವಿಸುತ್ತಿರಲಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ನೀವು ಅತೀವ ನಿರ್ಲಕ್ಷ ಮತ್ತು ಬೇಜವಾಬ್ದಾರಿತನ ತೋರಿದ್ದೀರಿ. ಈ ಎಲ್ಲ ಕಾರಣಗಳಿಂದಾಗಿ ಗೋಪಾಲರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಇಲಾಖೆ ಆದೇಶದಲ್ಲಿ ತಿಳಿಸಿದೆ.

Key words: Explosion -case- Chikkaballapur-PSI -suspend.