ಕೆ-ಸೆಟ್ ಪರೀಕ್ಷೆಗೆ ಪ್ರಿಪೇರ್ ಆಗುತ್ತಿದ್ದ ಗೃಹಿಣಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು…

ಮೈಸೂರು,ಫೆಬ್ರವರಿ,24,2021(www.justkannada.in):  ಕೆ-ಸೆಟ್ ಪರೀಕ್ಷೆಗೆ ಪ್ರಿಪೇರ್ ಆಗುತ್ತಿದ್ದ ಗೃಹಿಣಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

ನಂದಿನಿ(28) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮೈಸೂರಿನ ವಿಜಯನಗರ ಬಡಾವಣೆ 4 ನೇ ಹಂತದಲ್ಲಿ ಘಟನೆ ನಡೆದಿದೆ. ಮಕ್ಕಳು ಗಲಾಟೆ ಮಾಡುತ್ತಿದ್ದ ವಿಚಾರದಲ್ಲಿ ದಂಪತಿ ನಡುವೆ ಜಗಳ ಉಂಟಾಗಿತ್ತು. ಈ ಮಧ್ಯೆ ಗಂಡ ಬುದ್ದಿವಾದ ಹೇಳಿದ ಹಿನ್ನಲೆ ಬೇಸತ್ತ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.housewife-commits-suicide-hanging-mysore

ಚಿಕ್ಕಮಂಗಳೂರಿನ ನಿವಾಸಿಯಾಗಿರುವ ನಂದಿನಿ 5 ವರ್ಷಗಳ ಹಿಂದೆ ಮೈಸೂರಿನ ಅಭಿಲಾಷ್ ರನ್ನ ವಿವಾಹವಾಗಿದ್ದರು. ನಂದಿನಿಗೆ ಎರಡು ಮಕ್ಕಳಿದ್ದು, ಮಕ್ಕಳು ಗಲಾಟೆ ಮಾಡುತ್ತಿದ್ದಾಗ ಸಮಾಧಾನ ಪಡಿಸುವಂತೆ ಪತಿ ಅಭಿಲಾಷ್ ಬುದ್ದಿವಾದ ಹೇಳಿದ್ದರು.

ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  housewife commits- suicide – hanging-mysore