ನನ್ನ ಮೇಲೆ ಅಟ್ಯಾಕ್  ಗೆ ಪ್ರೀ ಪ್ಲಾನ್ ಮಾಡಿದ್ರು: ನನ್ನ ಸಿನಿಪಯಣಕ್ಕೆ ಮಸಿ ಬಳಿಯಲು ದೊಡ್ಡ ಹುನ್ನಾರ ನಡೆದಿದೆ- ನಟ ಜಗ್ಗೇಶ್ ಕಿಡಿ…

ಮೈಸೂರು,ಫೆಬ್ರವರಿ,24,2021(www.justkannada.in):  ದರ್ಶನ್ ಅಭಿಮಾನಿಗಳ ಕುರಿತಂತೆ ಆಡಿರುವ ಮಾತುಗಳ ಆಡಿಯೋ ವೈರಲ್ ಕುರಿತಂತೆ ನಡೆದ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.jk

ಈ ಕುರಿತು ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಜಗ್ಗೇಶ್, ನನ್ನ ಕಾರು ಮತ್ತು ನನ್ನ ಚಲನವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿತ್ತು. ರಾಮನಗದ ಸರ್ಕಲ್ ನಲ್ಲಿ ನನ್ನ ಅಟ್ಯಾಕ್ ಮಾಡುವ ದೊಡ್ಡ ಹುನ್ನಾರ ನಡೆದಿತ್ತು. ಆದರೆ ಮೈಸೂರಿನ ತಿ.ನರಸೀಪುರದ ಅತ್ತಹಳ್ಳಿಯಲ್ಲಿ ಕೊನೆಗೂ ನನ್ನ ಸುತ್ತುವರೆದು ಮಾತನಾಡಿದರು. ಕಂಠಪೂರ್ತಿ ಕುಡಿದು ಮಾತನಾಡಿದರು. ಹಾಗೆ ಅವರ ನಡೆದುಕೊಂಡ ಘಟನೆ ಸರಿಯಲ್ಲ ಎಂದು ಜಗ್ಗೇಶ್ ಹೇಳಿದರು.pre-planned-attack-actor-jaggesh-darshan-fans

ದರ್ಶನ್ ಜೈಲು ಸೇರಿದ ವೇಳೆ ಕಾಲಿಗೆ ಚಪ್ಪಲಿ ಹಾಕಿಸಿದೆ ನಿಲ್ಲಿಸಿದಾಗ ಚಿತ್ರರಂಗದ ಯಾರೂ ಅವರತ್ತ ಸುಳಿಯಲಿಲ್ಲ. ಆದರೆ ನಾನು ಆ ದಿನ ದರ್ಶನ್ ಕಷ್ಟಕ್ಕೆ ಸ್ಪಂದಿಸಿದೆ. ಅಷ್ಟೆ ಅಲ್ಲದೆ ದರ್ಶನ್ ಕನ್ನಡದ ರಜನಿಕಾಂತ್ ಅಂತ ಬಿರುದು ಕೊಟ್ಟೆ. ದರ್ಶನ್ ನ್ನನ್ನು ಇಂದು, ನಾಳೆ, ನಾಡಿದ್ದು ಪ್ರೀತಿಸುತ್ತೇನೆ. ಆದರೆ ಈ ಬೆಳವಣಿಗೆಗಳ ಕುರಿತಂತೆ ದರ್ಶನ್ ನನಗೆ ಒಂದು ಕಾಲ್ ಮಾಡಿ ಮಾತನಾಡಬೇಕಿತ್ತು. ಏನಾಯಿತು ಅಂತ ಕೇಳಿದ್ರೆ ನಾನು ಸ್ಪಷ್ಟನೆ ಕೊಡುತ್ತಿದ್ದೆ ಎಂದು ಜಗ್ಗೇಶ್ ನೋವಿನಿಂದ ನುಡಿದರು.

Key words: pre-planned –attack-  Actor- Jaggesh – darshan -fans