ರೂಸಾ ಪ್ರಾಯೋಜಿತ ವೀಡಿಯೋ ಕಾನ್ಫರೆನ್ಸ್ ಹಾಲ್ ಉದ್ಘಾಟನೆ : ‘’ಪುರಾಣನಾಮ ಚೂಡಾಮಣಿ’’ ಪುಸ್ತಕ ಅನ್ ಲೈನ್ ಅವತರಣಿಕೆ ಬಿಡುಗಡೆ

Promotion

ಮೈಸೂರು,ಅಕ್ಟೋಬರ್,21,2020(www.justkannada.in)  : ಜ್ಞಾನ ಮತ್ತು ಅನುಭವದಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದರ ಜೊತೆಗೆ ಅನುಭವದ ಮೂಲಕ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂದು ಕಲಿಸುವುದು ಅಗತ್ಯ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಹೇಳಿದರು.jk-logo-justkannada-logoಮೈಸೂರು ವಿಶ್ವವಿದ್ಯಾನಿಲಯ ಯುಜಿಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ವತಿಯಿಂದ ಯುಜಿಸಿ-ಎಚ್.ಆರ್.ಡಿ.ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ‘’ರೂಸಾ ಪ್ರಾಯೋಜಿತ ಹೊಸದಾಗಿ ನಿರ್ಮಿಸಿರುವ ವೀಡಿಯೋ ಕಾನ್ಫರೆನ್ಸ್ ಹಾಲ್, ವಾಣಿಜ್ಯಶಾಸ್ತ್ರ ಪುನಶ್ಚೇತನ ಶಿಬಿರದ ಉದ್ಘಾಟನೆ ಮತ್ತು ‘’ಪುರಾಣನಾಮ ಚೂಡಾಮಣಿ’’ ಪುಸ್ತಕದ ಅನ್ ಲೈನ್ ಅವತರಣಿಕೆಯ ಬಿಡುಗಡೆ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೃಷ್ಟಿಕೋನ, ಹೊಸತನವು ಯಾವುದೇ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಮುಖವಾಗಿದೆ. ಇಂದಿನ ಯುವಪೀಳಿಗೆಗೆ ಅವಕಾಶಗಳು ಹೆಚ್ಚಿನದಾಗಿದೆ. ಅವುಗಳನ್ನು ಉತ್ತಮ ಕೌಶಲ್ಯಗಳ ಮೂಲಕವೇ ಮಾತ್ರ ಪಡೆದುಕೊಳ್ಳಲು ಸಾಧ್ಯವಿದೆ. ಈ ಸತ್ಯವನ್ನು ಅರಿತು ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಣಗಾಲ್ ಅವರ ಕೃತಿ ‘’ಪುರಾಣನಾಮ ಚೂಡಾಮಣಿ’’ ಪುಸ್ತಕದ ಅನ್ ಲೈನ್ ಅವತರಣಿಕೆಯ ಕುರಿತು ಮೆಚ್ಚುಗೆವ್ಯಕ್ತಪಡಿಸಿದರು.Inauguration-Rosa-Sponsored-Video-Conference Hall-Purananaama Chudamani-Release-book-online-version

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದರು.

ಕಾರ್ಯಕ್ರಮದಲ್ಲಿ ಯುಜಿಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಪ್ರೊ.ಮಿಡತಲ ರಾಣಿ, ಪಿಎಂಇಬಿ ನಿರ್ದೇಶಕ ಪ್ರೊ.ಎನ್.ಕೆ.ಲೋಕನಾಥ್, ರೂಸಾ ಎಚ್.ಆರ್.ಡಿ.ಸಿ ಕಾರ್ಯಕ್ರಮ ಸಂಯೋಜಕ ಪ್ರೊ.ಎಸ್.ಜೆ.ಮಂಜುನಾಥ್, ಪುನಶ್ಚೇತನ ಶಿಬಿರದ ಸಂಯೋಜಕ ಪ್ರೊ.ಆರ್.ಮಹೇಶ್ ಇತರರು ಹಾಜರಿದ್ದರು.

key words : Inauguration-Rosa-Sponsored-Video-Conference Hall-Purananaama Chudamani-Release-book-online-version