ಸಂಕೀರ್ಣ ಸಮಸ್ಯೆಗಳ ಎದುರಿಸುವಂತಹ ಕೋರ್ಸ್ ಗಳ ಅಭಿವೃದ್ಧಿಪಡಿಸುವುದು ಅಗತ್ಯ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಅಕ್ಟೋಬರ್,21,2020(www.justkannada.in) : ಕೊರೊನಾದಂತಹ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುವಂತಹ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.jk-logo-justkannada-logo

ಮೈಸೂರು ವಿಶ್ವವಿದ್ಯಾನಿಲಯ ಯುಜಿಸಿ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ವತಿಯಿಂದ ಬುಧವಾರ ಯುಜಿಸಿ-ಎಚ್.ಆರ್.ಡಿ.ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ‘’ರೂಸಾ ಪ್ರಾಯೋಜಿತ ಹೊಸದಾಗಿ ನಿರ್ಮಿಸಿರುವ ವೀಡಿಯೋ ಕಾನ್ಫರೆನ್ಸ್ ಹಾಲ್, ವಾಣಿಜ್ಯಶಾಸ್ತ್ರ ಪುನಶ್ಚೇತನ ಶಿಬಿರದ ಉದ್ಘಾಟನೆ ಮತ್ತು ‘’ಪುರಾಣನಾಮ ಚೂಡಾಮಣಿ’’ ಪುಸ್ತಕದ ಅನ್ ಲೈನ್ ಅವತರಣಿಕೆಯ ಬಿಡುಗಡೆ’’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕೊರೊನಾ ವಿಶ್ವದ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಅನೇಕ ದೇಶಗಳು ಇನ್ನೂ ಸಾಂಕ್ರಾಮಿಕ ರೋಗದಿಂದ ಪಾರಾಗುವುದಕ್ಕೆ ಹೆಣಗುತ್ತಿವೆ ಎಂದು ಬೇಸರವ್ಯಕ್ತಪಡಿಸಿದರು. need-develop-courses-address-complex-issues- Chancellor-Prof G.Hemant Kumar

ಕೊರೊನಾದಿಂದ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ವೇಗ ಕುಂಠಿತ

ಕೊರೊನಾದಿಂದ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ವೇಗ ಕುಂಠಿತವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರಗಳು ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ.  ಈ ರೀತಿಯ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುವಂತಹ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಉದ್ಯೋಗ ಸಂಬಂಧಿಸಿದಂತೆ ಉತ್ತಮವಾಗಿ ಸಿದ್ಧರಾಗಬೇಕು

ಶಿಕ್ಷಣದಲ್ಲಿ ಲಾಭದ ಲೆಕ್ಕಾಚಾರ ಜತೆಗೆ ಸಾಮಾಜಿಕ ವ್ಯವಸ್ಥೆಯ ಮೇಲಿನ ಪರಿಣಾಮಗಳ ಅರಿತು ಬೋಧನೆಗೆ ಹೆಚ್ಚಿನ ಸ್ಥಳ ನೀಡಬೇಕು. ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಸವಾಲನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು. ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಬೋಧನಾ ಮಾರ್ಗ ಬದಲಾಯಿಸಿಕೊಳ್ಳಬೇಕು. ತಾಂತ್ರಿಕ ಮತ್ತು ಸಾಮಾಜಿಕ ಬದಲಾವಣೆಗಳ ನಡುವೆ ವಿದ್ಯಾರ್ಥಿಗಳು ಉದ್ಯೋಗ ಸಂಬಂಧಿಸಿದಂತೆ ಉತ್ತಮವಾಗಿ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.

ಕಡಿಮೆ, ಮಧ್ಯಮ ಆದಾಯದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೆಚ್ಚು ನಷ್ಟ

ಕೊರೊನಾದಿಂದ ಆರ್ಥಿಕ ಹಿಂಜರಿತವಾಗಿದ್ದು, ಸುಮಾರು 2.7 ಶತಕೋಟಿ ಕಾರ್ಮಿಕರು, ವಿಶ್ವದ 81% ರಷ್ಟು ಉದ್ಯೋಗಿಗಳು, ಕೆಲಸ ಮಾಡಿದರೂ, ಕಡಿಮೆ ಸಂಬಳ ದೊರೆಯುತ್ತದೆ. ಕಡಿಮೆ, ಮಧ್ಯಮ ಆದಾಯದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೆಚ್ಚು ನಷ್ಟ ಎದುರಾಗುವುದು ಎಂದು ತಿಳಿಸಿದರು.

key words : need-develop-courses-address-complex-issues- Chancellor-Prof G.Hemant Kumar