ಕೆಆರ್ ಎಸ್ ರಕ್ಷಣೆಗಾಗಿ ಅಕ್ರಮ ಗಣಿಗಾರಿಕೆ ತಡೆಗಟ್ಟುವುದೇ ನನ್ನ ನಿಲುವು- ಸಂಸದೆ ಸುಮಲತಾ ಅಂಬರೀಶ್.

ಮಂಡ್ಯ,ಜುಲೈ,6,2021(www.justkannada.in):  ಕೆಆರ್ ಎಸ್ ರಕ್ಷಣೆಗಾಗಿ ಅಕ್ರಮ ಗಣಿಗಾರಿಕೆ ತಡೆಗಟ್ಟುವುದೇ ನನ್ನ ನಿಲುವು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.jk

ಮಂಡ್ಯ ಜಿ.ಪಂ.ಕಾವೇರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸದೆ ಸುಮಲತಾ ಅಂಬರೀಶ್ , KRS ಡ್ಯಾಂ ಅಸ್ತಿತ್ವಕ್ಕೆ ನೇರವಾಗಿ ಅಡ್ಡಿಯಾಗಿರೋದು ಅಕ್ರಮ ಗಣಿಗಾರಿಕೆ. KRS ಡ್ಯಾಂ ಸುತ್ತಲಿನ ಶ್ರೀರಂಗಪಟ್ಟಣ-ಪಾಂಡವಪುರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ವಿಷಯವನ್ನ ಹಲವಾರು ಬಾರಿ ಸಂಸತ್ ಸಭೆಯಲ್ಲಿ ಚರ್ಚಿಸಿದ್ದೇನೆ. ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.

KRS ಡ್ಯಾಂ ರಕ್ಷಿಸಿ, ಅಕ್ರಮ ಚಟುವಟಿಕೆಗಳ ನಿಲ್ಲಿಸಿವುದು ಜಿಲ್ಲಾಡಳಿತದ ಜವಾಬ್ದಾರಿ. KRS ರಕ್ಷಣೆಗಾಗಿ ಅಕ್ರಮ ಗಣಿಗಾರಿಕೆ ತಡೆಗಟ್ಟುವುದೇ ನನ್ನ ನಿಲುವು. ಯಾರೇ ಪ್ರಭಾವಿದ್ದರೂ ಸರಿ ತಡೆಗಟ್ಟಲು ನಾನು ರೆಡಿ. ಯಾವುದೇ ಕಾರಣಕ್ಕೂ KRS ಜಲಾಶಯಕ್ಕೆ ತೊಂದರೆಯಾಗಬಾರದು. KRS ಉಳಿವಿಗಾಗಿ ಹೋರಾಟ ಮಾಡಲು ಸಿದ್ದ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

Key words: illegal mining – KRS- My stance –prevent-mandya-MP-Sumalatha Ambarish