ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಸಾವು…

ಬಳ್ಳಾರಿ,ಸೆ,10,2019(www.justkannada.in): ಸೆಲ್ಫಿ ಗೀಳಿಗೆ ಇಬ್ಬರು ಯುವಕರು ಬಲಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ತೆಪ್ಪದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ನೀರುಪಾಲಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಢಾಣಾಪುರದ ತುಂಗಭದ್ರ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಹರೀಶ್, 25 ವರ್ಷದ ಬಸವರಾಜು ಮೃತಪಟ್ಟಿರುವ ಯುವಕರು.

ತುಂಗಭದ್ರ ಹಿನ್ನೀರಿನಲ್ಲಿ ತೆಪ್ಪದಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ನೀರು ಪಾಲಾಗಿದ್ದಾರೆ.

Key words: Two people -drowned -water –selfie-ballari