ಈಜಲು ತೆರಳಿದ್ದ ಆರು ಮಂದಿ ನೀರಿನಲ್ಲಿ ಮುಳುಗಿ ಸಾವು…

ಕೋಲಾರ,ಸೆ,10,2019(www.justkannada.in):  ಈಜಲು ತೆರಳಿದ್ದ ಬಾಲಕ,  ಬಾಲಕಿಯರು ಸೇರಿ ಆರುಮಂದಿ ನೀರಿನಲ್ಲಿ ಜಲಸಮಾಧಿಯಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಕೆ.ಜಿಎಫ್ ತಾಲ್ಲೂಕಿನ ಮದರಘಟ್ಟ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬಾಲಕರಾದ ರೋಹಿತ್, ದನುಷ್, ತೇಜಾ, ರಕ್ಷಿತ್, ಬಾಲಕಿಯರಾದ ವೈಷ್ಣವಿ, ವೀಣಾ ಮೃತಪಟ್ಟವರು. ಮೃತರೆಲ್ಲರೂ 10 ರಿಂದ 12 ವರ್ಷದವರು ಎಂದು ತಿಳಿದು ಬಂದಿದೆ.

ಇಂದು ಮೊಹರಂ ರಜೆ ಹಿನ್ನೆಲೆ ಕಾಲುವೆಯಲ್ಲಿ ಈಜಲು ಆರು ಮಂದಿ ತೆರಳಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಅಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Key words: kolar-Six people -drowned –water-death