ಪರಿಹಾರ ಹಣ ಬಿಡುಗಡೆಗೆ ಆಗ್ರಹ: ಸಚಿವ ವಿ.ಸೋಮಣ್ಣಗೆ ಕೊಳೆತು ಒಣಗಿದ ಬೆಳೆಗಳ ಕಡ್ಡಿಗಳನ್ನು ನೀಡಿ ಸ್ವಾಗತಿಸಿದ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್‌…

ಮೈಸೂರು,ಸೆ,10,2019(www.justkannada.in): ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ  ನದಿ ಪ್ರವಾಹದಿಂದ ಕೊಳೆತು ಒಣಗಿದ ಬೆಳೆಗಳ ಕಡ್ಡಿಗಳನ್ನು ನೀಡಿ ಸ್ವಾಗತಿಸುವ ಮೂಲಕ  ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್‌ ಅವರು ನೆರೆ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಹುಣಸೂರು ನಗರದ ನಗರ ಸಭಾ ಸಭಾಂಗಣದಲ್ಲಿ ದಸರಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಸಭೆಗೆ ಆಗಮಿಸಿದ ಸಚಿವ ವಿ.ಸೋಮಣ್ಣ ಅವರಿಗೆ ಒಣಗಿದ ಬೆಳೆ ನೀಡಿ  ಪುಷ್ಪ ಅಮರನಾಥ್ ಸ್ವಾಗತ ಮಾಡಿದರು.

ಕರ್ನಾಟಕ ರಾಜ್ಯ ಸೇರಿದಂತೆ  ಹುಣಸೂರು ತಾಲ್ಲೂಕಿನಲ್ಲಿ ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ಕೋಟ್ಯಾಂತರ ರೂ ಬೆಳೆ, ಮನೆ ಸೇರಿದಂತೆ ಅಸ್ತಿ ಪಾಸ್ತಿ ನಷ್ಟ ವಾಗಿದ್ದು ಕೂಡಲೇ  ಕೇಂದ್ರ  ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

Key words: mysore- Compensation -demands -money-Dr Pushpa Amarnath-welcome- Minister- V. Somanna