ಇಂದು ಸಂಜೆ ICSE 10ನೇ ತರಗತಿ ಫಲಿತಾಂಶ ಪ್ರಕಟ

ಬೆಂಗಳೂರು, ಜುಲೈ 17, 2022 (www.justkannada.in): ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ICSE 10 ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ.

ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ www.cisce.org ಅಥವಾ www.results.cisce.org ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ನೋಡಬಹುದು.

ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ವಿದ್ಯಾರ್ಥಿಗಳು ತಮ್ಮ 10 ನೇ ತರಗತಿಯ ಫಲಿತಾಂಶಗಳನ್ನು ಇಲ್ಲಿ ಸಹ ಪರಿಶೀಲಿಸಬಹುದು: results.cisce.org, results.nic.in. ಈ ಕುರಿತು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಮಾಹಿತಿ ನೀಡಿದ್ದಾರೆ.