Sunday, August 2, 2026

BDA Apartments

Home Front Page ಜಯಸೂರ್ಯ ದಾಖಲೆ ಮುರಿದ ‘ಹಿಟ್ ಮ್ಯಾನ್’ ರೋಹಿತ್

ಜಯಸೂರ್ಯ ದಾಖಲೆ ಮುರಿದ ‘ಹಿಟ್ ಮ್ಯಾನ್’ ರೋಹಿತ್

ಬೆಂಗಳೂರು, ಡಿಸೆಂಬರ್ 19, 2019 (ww.justkannada.in): ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಆಕರ್ಷಕ ಶತಕ ಸಿಡಿಸಿದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶ್ರೀಲಂಕಾದ ದಿಗ್ಗಜ ಆಟಗಾರ ಜಯಸೂರ್ಯ ಅವರ ದಾಖಲೆ ಸರಿಗಟ್ಟಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. ಕೇವಲ 138 ಎಸೆತಗಳಲ್ಲಿ 159 ರನ್ ಗಳಿಸಿದ ರೋಹಿತ್ ಶರ್ಮಾ, ತಮ್ಮ ಶತಕಗಳ ಸಂಖ್ಯೆಯನ್ನು 28ಕ್ಕೆ ಏರಿಕೆ ಮಾಡಿಕೊಂಡರು.

ಆ ಮೂಲಕ ಶ್ರೀಲಂಕಾದ ಲೆಜೆಂಡ್ ಆಟಗಾರ ಸನತ್ ಜಯಸೂರ್ಯ ಅವರ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ. ಇದು ರೋಹಿತ್ ಶರ್ಮಾ ಅವರ 220 ನೇ ಏಕದಿನ ಪಂದ್ಯವಾಗಿದೆ.