ಬಂಗಲೆಯನ್ನೇ ಗಾಂಜಾ ನರ್ಸರಿಯಾಗಿ ಪರಿವರ್ತಿಸಿದ ಭೂಪ ಈಗ ಪೊಲೀಸರ ಅತಿಥಿ..!

how-an-iranian-mba-graduate-turned-bidadi-villa-into-ganja-nursery An Iranian MBA graduate allegedly teamed with others to turn a Bidadi villa into a ganja garden, where the Central Crime Branch (CCB) seized Rs 1 crore worth of narcotics. The CCB busted the drug racket and arrested four people, including two Iranian

 

ಬೆಂಗಳೂರು, ಸೆಪ್ಟೆಂಬರ್ ೨೯, ೨೦೨೧ (www.justkannada.in): ಇರಾನ್ ಮೂಲದ ಎಂಬಿಎ ಪದವೀಧರ ಇತರರೊಂದಿಗೆ ಸೇರಿ ಬೆಂಗಳೂರು ಬಳಿಯ ಬಿಡದಿಯಲ್ಲಿರುವ ಒಂದು ಬಂಗಲೆಯನ್ನು ಗಾಂಜಾ ಬೆಳೆಯುವ ನರ್ಸರಿಯನ್ನಾಗಿ ಪರಿವರ್ತಿಸಿದ ಸ್ಥಳದಿಂದ ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸ್ ಅಧಿಕಾರಿಗಳು ರೂ.೧ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಮಾದಕವಸ್ತು ಜಾಲವನ್ನು ಭೇದಿಸಿದ ಸಿಸಿಬಿ ಅಧಿಕಾರಿಗಳು ಇರಾನ್ ದೇಶದ ಇಬ್ಬರು ವ್ಯಕ್ತಿಗಳೂ ಸೇರಿದಂತೆ ನಾಲ್ವರನ್ನು ಈ ಸಂಬಂಧ ಬಂಧಿಸಿದ್ದಾರೆ.

ವಶಪಡಿಸಿಕೊಳ್ಳಲಾಗಿರುವ ಮಾದಕವಸ್ತುಗಳ ಪೈಕಿ ೧೩೦ ಹೈಡ್ರೊ ಗಾಂಜಾ ಸಸಿಗಳು, ೧೨.೮ ಕೆಜಿ ಒಣಗಿರುವ ಹೈಡ್ರೊ ಗಾಂಜಾ ಹಾಗೂ ಎಲ್‌ಎಸ್‌ಡಿ ಪಟ್ಟಿಗಳು ಸೇರಿವೆ.

ಈ ಕುರಿತು ಮಾತನಾಡಿರುವ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಆರ್. ಅವರಿಗೆ ಭಾನುವಾರದಂದು ಕಾವೇರಿನಗರ, ಆರ್‌ಟಿ ನಗರ ವ್ಯಾಪ್ತಿಯ ಹಲವು ಕಡೆ ಮಾದಕವಸ್ತುಗಳು ಮಾರಾಟವಾಗುತ್ತಿರುವ ಕುರಿತು ಮಾಹಿತಿ ಲಭಿಸಿದೆ. ಕೂಡಲೇ ಅವರು ತಮ್ಮ ಸಹೋದ್ಯೋಗಿ ಇನ್ಸ್ಪೆಕ್ಟರ್ ಬಿ.ಎಸ್. ಅಶೋಕ್ ಮತ್ತು ಇತರೆ ಅಧಿಕಾರಗಳ ಜೊತೆಗೂಡಿ ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿ ಮಾದವಕಸ್ತುಗಳನ್ನು ಕೊಳ್ಳುವ ಗ್ರಾಹಕರಿಗಾಗಿ ಕಾಯುತ್ತಿದ್ದಂತಹ ನಾಲ್ವರನ್ನು ಬಂಧಿಸಿದ್ದಾರೆ.

jk

ಆ ಪೈಕಿ ಜವಾದ್ ರೊಸ್ತಂಪುರ್ ಗೋಥಬ್ ಅಲಾದಿನ್, ೩೪, ಹಾಗೂ ಮೊಹಮ್ಮದಿ ಬಾರೋಗ್, ೩೫, ಇರಾನ್‌ನ ತೆಹ್ರಾನ್ ಮೂಲದವರಾಗಿದ್ದಾರೆ.

ಜವಾದ್ ಬಿಡದಿ ಬಳಿಯ ಈಗಲ್ಟನ್ ಗಾಲ್ಫ್ ವಿಲೇಜ್ ಬಳಿ ವಾಸವಿದ್ದರೆ, ಮೊಹಮ್ಮದಿ ಬೆಂಗಳೂರಿನ ಕಾವೇರಿನಗರದಲ್ಲಿ ವಾಸವಾಗಿದ್ದಾನೆ. ಹಗೆಡೆನಗರದ ಮೊಹಮ್ಮದ್ ಮೊಹಸೀನ್ ಉಜ್ ಜಮನ್ ಅಲಿಯಾಸ್ ಮೊಹಸೀನ್, ೩೧, ಹಾಗೂ ಪ್ರೇಜರ್ ಟೌನ್‌ನ ಸೌಂರ್ಸ್ದ ರಸ್ತೆಯ ನಿವಾಸಿ ಮೊಹಸೀನ್ ಖಾನ್, ೩೦, ಇವರ ಪಾಲುದಾರರಾಗಿದ್ದಾರೆ.

ಪೊಲೀಸರು ತಿಳಿಸಿದಂತೆ, ಜವಾದ್ ಬಿಡದಿಯ ಬಳಿ ವಾಸವಿದ್ದಂತಹ ವಿಲ್ಲಾದಲ್ಲಿ ಹೈಡ್ರೊ ಗಾಂಜಾ ಬೆಳೆದಿದ್ದನಂತೆ. ಪೊಲೀಸರು ಸುಮಾರು ಮಧ್ಯಾಹ್ನ ೩ ಗಂಟೆ ವೇಳೆಗೆ ವಿಲ್ಲಾ ಮೇಲೆ ದಾಳಿ ನಡೆಸಿ ಹೈಡ್ರೊ ಗಾಂಜಾ ಸಸಿಗಳು, ಒಂದು ತೂಕ ಅಳೆಯುವ ಯಂತ್ರ ಮತ್ತು ಜಾರ್‌ಗಳಲ್ಲಿ ಶೇಖರಿಸಿಟ್ಟಿದ್ದಂತಹ ಒಣಗಿದ ಹೈಡ್ರೊ ಗಾಂಜಾವನ್ನು ವಶಪಡಿಸಿಕೊಂಡರು.

ಇದರ ಜೊತೆಗೆ, ಯುವಿ ದೀಪಗಳು, ಎಲ್‌ಇಡಿ ದೀಪಗಳು, ವಾಕ್ಯೂಮ್ ಪ್ಯಾಕಿಂಗ್ ಪಾತ್ರೆಗಳು, ಅಪರಾಧಿಗಳಿಗೆ ಸೇರಿರುವಂತಹ ಒಂದು ಕಾರ್ ಹಾಗೂ ಮೊಬೈಲ್ ಫೋನ್‌ಗಳನ್ನೂ ಸಹ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಾದಕವಸ್ತು ಜಾಲದಲ್ಲಿ ಒಳಗೊಂಡಿರುವ ಇನ್ನಿಬ್ಬರು ಪ್ರತೀಕ್ ಜೈನ್ ಹಾಗೂ ಜಿತೇಂದ್ರ ಜೈನ್ ತಪ್ಪಿಸಿಕೊಂಡಿದ್ದಾರೆ.

ಜವಾದ್ ೨೦೧೦ರಲ್ಲಿ ಬೆಂಗಳೂರಿಗೆ ಬಂದಿದ್ದು, ಬಾಣಸವಾಡಿ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾನೆ. ಆತ ಕಮ್ಮನಹಳ್ಳಿಯ ಒಂದು ಮನೆಯಲ್ಲಿ ವಾಸವಾಗಿದ್ದ. ಆತನಿಗೆ ಮಾನಸಿಕ ಅನಾರೋಗ್ಯವಿತ್ತು. ಹಾಗಾಗಿ ತನ್ನ ಮನೋರೋಗಕ್ಕೆ ಸೂಕ್ತ ಮದ್ದಿಗಾಗಿ ಹುಡುಕುತ್ತಿದ್ದನಂತೆ. ಗಾಂಜಾದಲ್ಲಿ ಲಭ್ಯವಿರುವ ಕ್ಯಾನ್ನಾಬಿಡಿಯಾಲ್ (cannabidiol) ಅಥವಾ ಸಿಬಿಡಿ ಎಂಬ ಒಂದು ಅಂಶ ಮನೋರೋಗಕ್ಕೆ ಸೂಕ್ತ ಮದ್ದಾಗಿದ್ದು, ಅದನ್ನು ಸೇವಿಸಿದರೆ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಆತನಿಗೆ ಎಲ್ಲಿಂದಲೋ ಮಾಹಿತಿ ದೊರೆತಿತ್ತಂತೆ. ಆದರೆ ಮಾದಕವಸ್ತುಗಳ ಪ್ರಕರಣಗಳಲ್ಲಿ ಸಿಲುಕಿಕೊಂಡರೆ ಗಲ್ಲು ಶಿಕ್ಷೆಯೂ ಆಗಬಹುದು ಎಂಬ ಕಾರಣಕ್ಕಾಗಿ ಸುಮ್ಮನಿದ್ದನಂತೆ.

ಇಂಟೆರ್‌ನೆಟ್‌ನಲ್ಲಿ ಡಾರ್ಕ್ ವೆಬ್ ಮೂಲಕ ಯೂರೋಪ್‌ನಿಂದ ಹೈಡ್ರೊ ಗಾಂಜಾ ತರಿಸಿಕೊಂಡು ಕಮ್ಮನಹಳ್ಳಿಯಲ್ಲಿ ವಾಸವಿದ್ದ ಮನೆಯಲ್ಲಿ ಇದ್ದಂತಹ ಒಂದು ಫಿಶ್ ಟ್ಯಾಂಕ್‌ನಲ್ಲಿ ಬೆಳೆಯುವ ಪ್ರಯೋಗ ನಡೆಸಿದ. ಹೈಡ್ರೊ ಗಾಂಜಾ ಸೂರ್ಯನ ಬೆಳಿಕಿನಲ್ಲಿ ಬೆಳೆಯುವುದಿಲ್ಲ, ಅದಕ್ಕೆ ತಂಪಾದ ಹಾಗೂ ನಿಯಂತ್ರಿತ ಪರಿಸರದ ಅಗತ್ಯವಿದೆ. ಜೊತೆಗೆ ಆ ಗಿಡಗಳು, ಸೂಕ್ತ ಬೆಳಕು, ಎಸಿ ಹಾಗೂ ಫ್ಯಾನ್‌ಗಳ ವ್ಯವಸ್ಥೆಯಲ್ಲಿ ಕೆಲವು ನಿರ್ಧಿಷ್ಟ ರಾಸಾಯನಿಕಗಳಿಂದ ಕೂಡಿರುವ ಕೋಕೊಪೀಟ್ ಪಾಟ್‌ಗಳಲ್ಲಿಯೂ ಬೆಳೆಯುತ್ತವಂತೆ. ಹೈಡ್ರೊ ಗಾಂಜಾವನ್ನು ಸಾಮಾನ್ಯವಾಗಿ ತಂಪಾದ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತದೆ.

ಜವಾದ್ ಆನ್‌ಲೈನ್ ಮೂಲಕ ‘ಮಾರಿಯುವಾನ ಬೈಬಲ್’ ಎಂಬ ಪುಸ್ತಕವನ್ನು ಖರೀದಿಸಿ ಅದನ್ನು ಓದುವುದರ ಜೊತೆಗೆ, ವೆಬ್‌ಸೈಟ್‌ಗಳಲ್ಲಿ ಹೈಡ್ರೊ ಗಾಂಜಾ ಬೆಳೆಯುವ ಕುರಿತಾಗಿ ಲಭ್ಯವಾಗುವ ಹಲವು ಲೇಖನಗಳನ್ನು ಓದಿ ಮಾಹಿತಿ ಪಡೆದುಕೊಂಡಿದ್ದ. ಫಿಶ್ ಟ್ಯಾಂಕ್‌ನಲ್ಲಿ ಗಾಂಜಾ ಬೆಳೆಯುವುದನ್ನು ಮುಂದುವರೆಸಿದ ಆತ, ಸಸಿಗಳನ್ನು ಕೀಟಗಳಿಂದ ರಕ್ಷಿಸಲು ರಾಸಾಯನಿಕ ಪುಡಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದನಂತೆ. ಜೊತೆಗೆ ಅದ್ಯಾವುದೋ ನಿಯಂತ್ರಕ ಯಂತ್ರಗಳನ್ನೂ ತರಿಸಿಕೊಂಡಿದ್ದಾನೆ.

ಬಿಡದಿಯಲ್ಲಿ ಮಾಸಿಕ ರೂ.೩೬,೦೦೦ ವಿಲ್ಲಾ ಬಾಡಿಗೆಗೆ

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವಂತಹ ಮಾದಕವಸ್ತು ಮಾರಾಟ ಹಾಗೂ ಪೊಲೀಸರ ಕಾರ್ಯಾಚರಣೆಯ ಕುರಿತು ತಿಳಿದುಕೊಂಡ ಜವಾದ್ ಬಿಡದಿಯಲ್ಲಿ ಮಾಸಿಕ ರೂ.೩೬,೦೦೦ ಬಾಡಿಗೆ ಪಾವತಿಸಬೇಕಾಗುವ ವಿಲ್ಲಾವನ್ನು ಬಾಡಿಗೆಗೆ ಪಡೆದಿದ್ದನಂತೆ. ಅಲ್ಲಿ ಆತ ಹೈಡ್ರೊ ಗಾಂಜಾವನ್ನು ಒಣಗಿಸಿ ಅದನ್ನು ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ಪಾರ್ಟಿ ಮಾಡುವವರು ಹಾಗೂ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದನಂತೆ.

ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಹಾಗೂ ಯಶವಂತಪುರ ಪೊಲೀಸರು ಈತನನ್ನು ಈ ಹಿಂದೆ ಒಮ್ಮೆ ಬಂಧಿಸಿದ್ದರು. ಆತನ ಸಹಚರ ಮೊಹಮ್ಮದಿ ಡಾರ್ಕ್ ವೆಬ್ ಮೂಲಕ ಎಲ್‌ಎಸ್‌ಡಿ ಸ್ಟಿçಪ್‌ಗಳನ್ನು ತರಿಸಿ ಅದನ್ನು ತನ್ನ ಇತರೆ ಸಹಚರರ ಮೂಲಕ ನಗರದ ಕೆಲವು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದನಂತೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : how-an-iranian-mba-graduate-turned-bidadi-villa-into-ganja-nursery