ರಾಜ್ಯದಲ್ಲಿ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾದ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ.

ಬೆಂಗಳೂರು,ಸೆಪ್ಟಂಬರ್,17,2021(www.justkannada.in): ರಾಜ್ಯದಲ್ಲಿ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾದ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಇದು ಸೀಸನಲ್ ಫೀವರ್ ಎಂದು ತಿಳಿಸಿದ್ದಾರೆ.

ಈಕುರಿತು ಇಂದು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೊರೋನಾ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಮಕ್ಕಳು ಮನೆಯೊಳಗೇ ಇದ್ದರು. ಈಗ ರಾಜ್ಯದಲ್ಲಿ ಎಲ್ಲಾ ಚಟುವಟಿಕೆಗಳು ಪುನಾರರಂಭವಾಗಿದೆ. ಹೀಗಾಗಿ ಮಕ್ಕಳಿಗೆ ಸೀಸನಲ್ ಫೀವರ್ ಶುರುವಾಗಿದೆ. ಈ ಬಾರಿ ವೈರಲ್ ಫೀವರ್ ಕಡೆ ಗಮನಹರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಟೆಸ್ಟಿಂಗ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇನ್ನು ಆರೋಗ್ಯ ಇಲಾಖೆಯೊಂದಿಗೆ ಚರ್ಚೆ ಮಾಡಿ ಆಸ್ಪತ್ರೆಗೆ ಬೆಡ್ ಸಮಸ್ಯೆ ಬಗೆಹರಿಸಲಾಗುವುದು. ಎಲ್ಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು. ತಜ್ಞರು ಈಗಾಗಲೆ ಕೊರೊನಾ 3 ನೇ ಅಲೆ ಬಗ್ಗೆ ವರದಿ ನೀಡಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಚರ್ಚೆ ಮಾಡಲಾಗುವುದು  ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Key words: Health Minister -Dr K Sudhakar – increase – viral fever – children – state.

ENGLISH SUMMARY…

Not viral fever, just seasonal fever: Health Minister Dr. K. Sudhakar
Bengaluru, September 17, 2021 (www.justkannada.in): Responding to the increasing number of cases of viral fever among the children in the State, Medical Education and Health Minister Dr. K. Sudhakar said it is just seasonal fever.
In his response to the cases, he explained that the children had remained inside the houses for a long time due to the COVID-19 lockdown. “All activities have commenced in the State now again. Hence, they are just cases of seasonal fever. However, I have instructed the Health Department officials to focus on the viral fever cases now and also have asked to conduct testings,” he said.
Further, he also informed that he would speak to the Health Department officials and address the bed problem in the hospitals, and ensure proper treatment to all the ailing children across the state. “The Corona expert committee has provided its report on the possibility of 3rd wave. I will discuss it with the technical committee soon,” he added.
Keywords: Health Minister/ Dr. K. Sudhakar/ viral fever/ increasing cases/ seasonal fever