ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಯದುವೀರ್ ಒಡೆಯರ್

ಮೈಸೂರು, ಡಿಸೆಂಬರ್ 29, 2019 (www.justkannada.in): ಪೇಜಾವರ ಶ್ರೀಪಾದರು ನಿಧನ ಹಿನ್ನೆಲೆಯಲ್ಲಿ
ರಾಜವಂಶಸ್ಥ ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ.

ಯದುವೀರ್ ಸಾಮಾಜಿಕ‌ ಜಾಲತಾಣದಲ್ಲಿ ಸಂತಾಪ ಹಂಚಿಕೊಂಡಿದ್ದಾರೆ. ವಿಶ್ವೇಶ್ವ ತೀರ್ಥ ಶ್ರೀಪಾದರು ದೈವಾದೀನರಾಗಿರುವುದು ಬಹಳ ದುಃಖ ವಾಗಿದೆ. ಬಾಲ್ಯದಲ್ಲೇ ವೈಯಕ್ತಿಕ ಜೀವನ ತ್ಯಜಿಸಿ 80 ವರ್ಷ ಕೃಷ್ಣನ ಸೇವೆ ಮಾಡಿದ್ದಾರೆ. ಸಮಾಜ ಸುಧಾರಣೆಗೆ ತಮ್ಮ ಜೀವನ‌ ಮುಡುಪಿಟ್ಟಿದ್ದರು.

ಶ್ರೀಗಳ ಹಗಲಿಕೆಯ ದುಃಖ ಬರಿಸುವ ಶಕ್ತಿಯನ್ನು ಚಾಮುಂಡೇಶ್ವರಿ ನೀಡಲಿ. ಪೇಜಾವರ ಸ್ವಾಮೀಜಿ ಮತ್ತು ಜಯಚಾಮರಾಜ ಒಡೆಯರ್ ಅವರ ಇರುವ ಹಳೆಯ ಭಾವಚಿತ್ರ ಶೇರ್ ಮಾಡಿರುವ ಯದುವೀರ್ ಸ್ಮರಿಸಿದ್ದಾರೆ.