ಇಹಲೋಕ ತ್ಯಜಿಸುವ ವಿಷಯ ಪೇಜಾವರ ಶ್ರೀಗಳಿಗೆ ಮೊದಲೇ ತಿಳಿದಿದ್ದೇ…? ಶ್ರೀಮಠದ ಅಂಗಳದಲ್ಲಿ ಚರ್ಚೆ….

ಉಡುಪಿ, ಡಿಸೆಂಬರ್ 29, 2019 (www.justkannada.in): ವಿಶ್ವೇಶತೀರ್ಥ ಶ್ರೀಗಳಿಗೆ ಇಹಲೋಕ ತ್ಯಜಿಸುವ ವಿಚಾರ ಮೊದಲೇ ತಿಳಿದಿತ್ತೆ ಎಂಬ ಚರ್ಚೆ ನಡೆದಿದೆ…

ಪೇಜಾವರ ಶ್ರೀಗಳು ಮಂತ್ರಾಲಯದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಡಿಸೆಂಬರ್ 23 ಬಳಿಕ ವಿದೇಶಕ್ಕೆ ಹೋಗಬೇಡಿ ಎಂದು ತಿಳಿಸಿದ್ದಾರೆ.

ಮಂತ್ರಾಲಯದಲ್ಲಿ ಶ್ರೀಗಳ ಭೇಟಿಯ ಸಂದರ್ಭದಲ್ಲಿ ಸದ್ಯಕ್ಕೆ ಡಿಸೆಂಬರ್ 23 ರ ಬಳಿಕ ವಿದೇಶಕ್ಕೆ ಹೋಗಬೇಡಿ. ಎಂದು ಪೇಜಾವರ ಶ್ರೀಗಳು ಹೇಳಿದ್ದು, ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ನಕ್ಕು ಸುಮ್ಮನಾಗಿದ್ದಾರೆ.

ಹೀಗೆ ಆಗುತ್ತದೆಯೇ ಎಂಬುದು ಪೇಜಾವರ ಶ್ರೀಗಳಿಗೆ ಮೊದಲೇ ಮುನ್ಸೂಚನೆ ಇತ್ತೆ ಎಂಬುದು ತಿಳಿದಿಲ್ಲ. ಅವರು ಹೇಳಿದಂತೆ ನಾನು ವಿದೇಶಕ್ಕೆ ಹೋಗಿಲ್ಲ ಎಂದು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.