ಹವಾಲ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳ ಸೆರೆ…

ಬೆಂಗಳೂರು,ಅಕ್ಟೋಬರ್,10,2020(www.justkannada.in):  ಹವಾಲಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನ ಬೆಂಗಳೂರಿನ ಸದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಮೊಹಮ್ಮದ್ ನಿಹಾಲ್ ಮತ್ತು ಅನ್ಸರ್ ಬಂಧಿತ ಆರೋಪಿಗಳು. ಬಂಧಿತ ಇಬ್ಬರಿಂದ ಸುಮಾರು 27 ಲಕ್ಷ ರೂ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಮೊಹಮ್ಮದ್ ನಿಹಾಲ್ ಮತ್ತಿ ಅನ್ಸರ್ ತಾವರೇಕೆರೆಯ ಎಸ್ ಬಿಐ ಶಾಖೆ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ  ಬ್ಯಾಗ್ ಪರಿಶೀಲಿಸಿದಾಗ 27 ಲಕ್ಷ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದ ಹಿನ್ನೆಲೆ ಹಣವನ್ನ ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನ ಬಂಧಿಸಿದ್ದಾರೆ.

Key words: havala scam- Arrest -two -accused